ವಿಷ ಕುಡಿದು ರೈತ ಆತ್ಮಹತ್ಯೆ

18-GPT-1-KRUSHNAYYA
Published on

ಗುಂಡ್ಲುಪೇಟೆ: ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ ಕಿರುಕುಳ ತಾಳಲಾರದೆ ರೈತರೊಬ್ಬರು ಮಂಗಳವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಕೃಷ್ಣಯ್ಯ(65) ಆತ್ಮಹತ್ಯೆ ಮಾಡಿಕೊಂಡವರು. ಐದು ವರ್ಷಗಳ ಹಿಂದೆ ಟ್ರ್ಯಾಕ್ಟರ್ ಖರೀದಿಸಲು 7 ಲಕ್ಷ ರೂ. ಸಾಲ ಪಡೆದಿದ್ದರು. ಕರೊನಾ ಪರಿಣಾಮ ಸಾಲದ ಕಂತು ವಿಳಂಬವಾದ ಹಿನ್ನೆಲೆಯಲ್ಲಿ ಫೈನಾನ್ಸ್‌ನವರು ಆರು ತಿಂಗಳ ಹಿಂದೆ ಟ್ರ್ಯಾಕ್ಟರ್ ಸೀಜ್ ಮಾಡಿ ಇನ್ನೂ ಬಾಕಿಯುಳಿದ ಹಣಕ್ಕೆ ಚೆಕ್ ಪಡೆದು ಬ್ಯಾಂಕಿಗೆ ಹಾಕಿದ್ದರು. ಖಾತೆಯಲ್ಲಿ ಹಣವಿಲ್ಲದೆ ಚೆಕ್‌ಬೌನ್ಸ್ ಆಗಿದ್ದರಿಂದ ಅಪಮಾನದಿಂದ ಮನನೊಂದ ಕೃಷ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net