ವಿಶ್ವರಾಜ ಸಕ್ಕರೆ ಕಾರ್ಖಾನೆಯಿಂದ ಉತ್ತಮ ದರ ನಿಗದಿ

21Huk2
Published on

ಹುಕ್ಕೇರಿ: ವಿಶ್ವರಾಜ ಶುಗರ್ಸ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ 14 ಲಕ್ಷ ಟನ್ ಕಬ್ಬು ನುರಿಸುವ ಸಂಕಲ್ಪ ಮಾಡಿದ್ದೇವೆ. ರೈತರ ಕಬ್ಬಿಗೆ ಉತ್ತಮ ದರ ನೀಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ತಾವು ಬೆಳೆದ ಕಬ್ಬನ್ನು ತಾಲೂಕಿನ ಕಾರ್ಖಾನೆಗಳಿಗೆ ಪೂರೈಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಿರ್ದೇಶಕ ಪವನ ಕತ್ತಿ ಮಾತನಾಡಿ, ಈ ವರ್ಷ ಗೋವಿನಜೋಳದಿಂದ ಎಥೆನಾಲ್ ಉತ್ಪಾದಿಸುವ ಘಟಕ ಪ್ರಾರಂಭಿಸಲಾಗುತ್ತದೆ. ಇದರಿಂದ ಈ ಭಾಗದ ರೈತರ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರೈತರು ಬೆಳೆದ ಕಬ್ಬು ಹಾಗೂ ಗೋವಿನಜೋಳವನ್ನು ವಿಶ್ವರಾಜ

ಶುಗರ್ಸ್‌ನಿಂದ ಖರೀದಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಸಂದೀಪ ಕತ್ತಿ, ಸತ್ಯಪ್ಪ ಚಂದರಗಿ, ಬಸವಣ್ಣಿ ಬಂಬಲವಾಡ, ದಿಲೀಪ ವಾಳಿಖಿಂಡಿ, ಶಂಕರ ಚಂದರಗಿ, ಪರಸಪ್ಪ ಹಣಮನ್ನವವರ, ಬಾಹುಬಲಿ ಮುನ್ನೋಳಿ, ಅಶೋಕ ಬೆಲ್ಲದ, ಸಿದ್ರಾಮ ಮುಗಳಿ, ಉದ್ಯಮಿ ಆನಂದ ಲಕ್ಕುಂಡಿ, ಸಂಜೀವ ನಾಯಿಕ, ವಿಶ್ವನಾಥ ನಾಯಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net