ವಿಶ್ವಮಾನವ ಕಾಲೇಜಿಗೆ 100ರಷ್ಟು ಫಲಿತಾಂಶ

result
Published on

ಚಿತ್ರದುರ್ಗ: ಹೊರವಲಯದ ಸೀಬಾರ-ಗುತ್ತಿನಾಡಿನ ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದ್ದು, 215 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೈಕಿ 106 ಅತ್ಯುನ್ನತ, 82 ಪ್ರಥಮ ಶ್ರೇಣಿ ಸೇರಿ ಒಟ್ಟು 188 ಮಂದಿ ಉತ್ತೀರ್ಣರಾಗಿದ್ದಾರೆ. ಲಾಲ್ ಬೀ, ಕೆ.ಆರ್.ಸುಜಾತಾ 600ಕ್ಕೆ ತಲಾ 580, ಸಿ.ಹೇಮಲತಾ 577, ಎಸ್.ಕಣಮೇಶ್ 576, ಯು.ಎಸ್. ಮಂಜುನಾಥ 575 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೈಕಿ 12 ಅತ್ಯುನ್ನತ, 13 ಪ್ರಥಮ, ಇಬ್ಬರು ದ್ವಿತೀಯ ಶ್ರೇಣಿ ಸೇರಿ ಒಟ್ಟು 27 ಮಂದಿ ತೇರ್ಗಡೆ ಹೊಂದಿದ್ದಾರೆ. ಡಿ.ಎಸ್.ರಮ್ಯಾ 584, ಜಿ.ಎಸ್.ಮಾನಸ 567, ತೌಸೀಫ್, ಎನ್.ಧನುಷ್ ತಲಾ 559, ಆರ್.ಟಿ.ರಾಕೇಶ್ 556 ಅಂಕ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಈ ಸಾಧನೆಗೆ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net