ವಿಶ್ವಮಾನ ಶಾಲೆಗೆ ಸಮಗ್ರ ಪ್ರಶಸ್ತಿ ಗರಿ

CTD VISHVAMANAVA
Published on

ಚಿತ್ರದುರ್ಗ: ಶಿಕ್ಷಣ ಇಲಾಖೆ ಹಾಗೂ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿಯಲ್ಲಿ ಈಚೆಗೆ ಆಯೋಜಿಸಿದ್ದ ಕಸಬಾ ಹೋಬಳಿಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸೀಬಾರ-ಗುತ್ತಿನಾಡು ವಿಶ್ವಮಾನವ ವಸತಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
*ವೈಯಕ್ತಿಕ ಆಟಗಳ ಬಾಲಕರ ವಿಭಾಗ: ಕೆ.ಕಿರಣ್ 100 ಮೀ ಓಟ, ಗುಂಡು ಎಸೆತ (ಪ್ರ), ಎಚ್.ರಾಕೇಶ್ 110 ಮೀ ಹರ್ಡಲ್ಸ್, ತ್ರಿವಿಧ ಜಿಗಿತ (ಪ್ರ), ಆರ್.ಸಂದೀಪ್ 400 ಮೀ ಓಟ (ಪ್ರ), ಕೆ.ಮಂಜುನಾಥ್ 200 ಮೀ ಓಟ (ಪ್ರ), ಉದ್ದ ಜಿಗಿತ (ದ್ವಿ), ಸಿ.ತಿಪ್ಪೇಸ್ವಾಮಿ 400 ಮೀ. ಹರ್ಡಲ್ಸ್ (ಪ್ರ), ಆರ್.ಎ.ಜೀವನ್, ಸರಪಳಿಗುಂಡು ಎಸೆತ (ಪ್ರ), ಕೆ.ವಿ.ಮನೋಜ್ ಉದ್ದ ಜಿಗಿತ (ಪ್ರ), ಚಕ್ರಎಸೆತ (ದ್ವಿ), ನಂದನ್‌ಕುಮಾರ್ ಎತ್ತರ ಜಿಗಿತ (ಪ್ರ), ಗುಂಡು ಎಸೆತ (ದ್ವಿ), ಎಂ.ಎಸ್.ಶ್ರಾವಣಿ 1500 ಮೀ ಓಟ (ಪ್ರ), ಯು.ಲಾವಣ್ಯಾ 800 ಮೀ ಓಟ (ಪ್ರ), ಎನ್.ಬಿಂದುಶ್ರೀ 400 ಮೀ ಓಟ, 110 ಮೀ ಹರ್ಡಲ್ಸ್ (ಪ್ರ), ಜಿ.ಕೆ.ಪೂರ್ಣಿಮಾ ಚಕ್ರ ಎಸೆತ (ಪ್ರ), ಆರ್.ಅನುಶ್ರೀ ಭರ್ಚಿ ಎಸೆತ (ಪ್ರ) ಹಾಗೂ ಇತರೆ ವಿಭಾಗಗಳಲ್ಲಿ ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
*ಬಾಲಕಿಯರ ವೈಯಕ್ತಿಕ ಆಟಗಳ ವಿಭಾಗ: ಎನ್.ಬಿಂದುಶ್ರೀ ಹಾಗೂ ಬಾಲಕರ ವೈಯಕ್ತಿಕ ಆಟಗಳ ವಿಭಾಗದಲ್ಲಿ ರಾಕೇಶ್ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.
*ಗುಂಪು ಆಟಗಳಲ್ಲಿ ಬಾಲಕರ ವಿಭಾಗ: 4/100 ಮತ್ತು 4/400 ಮೀ ರಿಲೇ ಓಟ, ಖೋ- ಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಷಟಲ್‌ಬ್ಯಾಡ್ಮಿಂಟನ್ (ಪ್ರ), ಥ್ರೋಬಾಲ್ ದ್ವಿತೀಯ.
ಬಾಲಕಿಯರ ವಿಭಾಗ: ಬಾಲ್‌ಬ್ಯಾಡ್ಮಿಂಟನ್, 4/ 100 ಮತ್ತು 4/400 ಮೀ ರಿಲೇ ಓಟ (ಪ್ರ), ಖೋ-ಖೋ ಹಾಗೂ ಥ್ರೋಬಾಲ್ (ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಕಾರ‌್ಯದರ್ಶಿ ಎಂ.ನೀಲಕಂಠದೇವರು, ಬೋಧಕ ಹಾಗೂ ಬೋಧಕರೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net