

ಹುಮನಾಬಾದ್: ಪಟ್ಟಣದ ವಿಶ್ವಭಾರತಿ ಪ್ರೌಢ ಶಾಲೆ ಕನ್ನಡ ಮಾಧ್ಯಮ ಮತ್ತು ವಿಶ್ವೇಶ್ವರಯ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಬ್ಬಡಿಯಲ್ಲಿ ವಿಶ್ವಭಾರತಿ ಪ್ರಾಥಮಿಕ ಶಾಲೆಯ ಸಂಜನಾ, ಐಶ್ವರ್ಯ, ಭವಾನಿ, ಪೂಜಾ, ಭವಾನಿ, ಭಾಗ್ಯಶ್ರೀ, ಅರುಣಾ, ಅಶ್ವಿನಿ, ಸ್ಫೂರ್ತಿ, ಸಂಜನಾ, ಲಕ್ಷ್ಮೀ ಅವರ ತಂಡ, ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ನಂದಿನಿ, ಐಶ್ವರ್ಯ, ಮೀನಾಕ್ಷಿ, ಸೇವಂತಿ, ಸುಷ್ಮಾ, ಭವಾನಿ ಎಸ್., ಕಾವ್ಯಾಂಜಲಿ ಸಂಜನ್ ಆರ್ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ.
ಪ್ರಾಥಮಿಕ ಶಾಲೆಯ ಬಾಲಕೀಯರ ವಿಭಾಗದ ಬಾಸ್ಕೆಟ್ ಬಾಲ್‌ನಲ್ಲಿ ವಿಶ್ವೇಶ್ವರಯ್ಯಾ, ಶ್ರದ್ಧಾ ಜಿ, ಮಯೂರಿ, ಶ್ರದ್ಧಾ ಎ., ಸಂಧ್ಯಾ ಆರ್, ವಚನಶ್ರೀ, ಏಂಜಲ್ ಮತ್ತು ಹರ್ಷಿತಾ ಅವರ ತಂಡ, ಪ್ರೌಢ ಶಾಲೆ ಬಾಲಕಿಯರ ವಿಭಾಗದಲ್ಲಿ ಗಾಯತ್ರಿ, ಲಕ್ಷಿ ಪ್ರಕ್ಷಿಕಾ, ಶ್ವೇತಾ, ಶಾರೋಲಿನ, ಸಂಜನಾ, ಶ್ರೇಯಾ, ದೃತಿ, ವೈಷ್ಣವಿ, ಪೂಜಾ, ಸ್ಮೀತಾ, ನಂದಿನಿ ಅವರ ತಂಡ ಅತ್ಯುತ್ತಮ ಪ್ರದರ್ಶನ ತೋರಿ, ಸಾಧನೆ ಮೆರೆದಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಭೂರೇಶ ಹರ್ಷ ವ್ಯಕ್ತಪಡಿಸಿದ್ದಾರೆ.