‘ವಿಶ್ವಧರ್ಮ ಪ್ರವಚನ’ 20ರಿಂದ

17 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ಪ್ರವಚನ ಸಮಿತಿ ವತಿಯಿಂದ ಬೈಲೂರ ನಿಷ್ಕಲ ಮಂಟಪ, ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರಿಂದ ‘ವಿಶ್ವಧರ್ಮ ಪ್ರವಚನ’ ಕಾರ್ಯಕ್ರಮವನ್ನು ನ. 20ರಿಂದ ಡಿ. 10 ರವರೆಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕ ಶಿವಶರಣ ಕಲಬಶೆಟ್ಟರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಟೌನ ಹಾಲ್ ಆವರಣದಲ್ಲಿ ನಿತ್ಯ ಸಂಜೆ 6.30ರಿಂದ 7ರವರೆಗೆ ಸಂಗಮೇಶ ಪಾಟೀಲ ಹಾಗೂ ಬಸವರಾಜ ಹೊನ್ನಿಗನೂರ ಅವರಿಂದ ವಚನ ಸಂಗೀತ ನಡೆಯಲಿದ್ದು, 7 ಗಂಟೆಯಿಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ ಎಂದರು.
ಮುರಘಾಮಠ, ಬಸವಕೇಂದ್ರ, ಲಿಂಗಾಯತ ವಿಧ್ಯಾಭಿವೃದ್ದಿ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ತತ್ವ ಪ್ರಸಾರ ಸಂಸ್ಥೆ, ಸಿದ್ದಪ್ಪ ಕಂಬಳಿ ಪ್ರತಿಷ್ಠಾನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬಿ.ಆರ್. ಅಂಬೇಡ್ಕರ್ ಸರ್ವಾಂಗೀಣ ಅಭಿವೃದ್ಧಿ ಸಂಘ ಸೇರಿ ವಿವಿಧ ಸಂಘಟನೆಗಳ ಸಹಕಾರದಿಂದ ಕಾರ್ಯಕ್ರಮ ಜರುಗಲಿದೆ. ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ನಿವೃತ್ತ ಗ್ರಂಥಪಾಲಕ ಎಸ್.ಆರ್. ಗುಂಜಾಳ ಉದ್ಘಾಟನೆ ನೆರೆವೇರಿಸುವರು ಎಂದರು.
ಸಿದ್ದರಾಮಣ್ಣ ನಡಕಟ್ಟಿ, ರಾಜು ಮರಳಪ್ಪನವರ, ಅರ್ಜುನ ಪತ್ರೆನ್ನವರ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಬಸವಂತ ತೋಟದ, ನಾಗಯ್ಯ ಹಿರೇಮಠ, ಶಿವರುದ್ರಗೌಡ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net