

ಚಿಕ್ಕಮಗಳೂರು: ವಿಶ್ವದೆದುರು ಭಾರತ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಜನಪರ ಯೋಜನೆಗಳು ಯಶಸ್ವಿಗೊಂಡಿರುವ ಕಾರಣ ಭವಿಷ್ಯದಲ್ಲಿ ಭಾರತವು ವಿಶ್ವಗುರುವಾಗಲಿದೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಲಕ್ಷಿö್ಮÃಶ ನಗರದಲ್ಲಿ ಬಿಜೆಪಿ ಯುವಮೋರ್ಚಾದ ನಗರ ಮಂಡಲದಿAದ ಸೋಮವಾರ ಆಯೋಜಿಸಿದ್ಧ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿಗಳ ಜನ್ಮದಿನದಂದು ವೈದ್ಯಕೀಯ ಶಿಬಿರ, ಸ್ವಚ್ಛತಾ ಆಂದೋಲನವೆAಬ ಸೇವಾ ಯಜ್ಞದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ಸ್ವತಃ ಪ್ರಧಾನಿಗಳೇ ತಾವು ಪ್ರಧಾನಿಯಲ್ಲ. ೧೪೦ ಕೋಟಿ ಜನರ ಪ್ರಧಾನ ಸೇವಕ ಎಂದು ಹೇಳಿದ್ದಾರೆ. ಹಾಗಾಗಿಯೇ ಮೊದಲ ಬಾರಿ ಪ್ರಧಾನಿಯಾದ ಮೋದಿ ಸಂವಿಧಾನ ಪುಸ್ತಕ ಹಾಗೂ ಪ್ರಜಾಪ್ರಭುತ್ವದ ದೇಗುಲ ಸಂಸತ್‌ನ್ನು ನಮಸ್ಕರಿಸಿ ಮುನ್ನೆಡೆದರು ಎಂದರು.
ಹನ್ನೊAದು ವರ್ಷ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ನರೇಂದ್ರ ಮೋದಿ ಅವರು ಜಗತ್ತಿ ನ ಮುಂದೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಬಡವರ ಕಲ್ಯಾಣದ ಯೋಜನೆಯ ಹಣವನ್ನು ಮದ್ಯ ವರ್ತಿಗಳಿಂದ ತಪ್ಪಿಸಿ ಪ್ರಾಮಾಣಿಕವಾಗಿ ಖಾತೆಗೆ ಜಮೆಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
ದೇಶದ ಬಡವ, ಮದ್ಯಮ, ಶೋಷಿತ ವರ್ಗದವರಿಗೆ ಉಜ್ವಲ ಯೋಜನೆಯಡಿ ಶೇ. ೯೦ರಷ್ಟು ಮಂದಿಗೆ ಗ್ಯಾಸ್ ಸೌಲಭ್ಯ, ಇನ್ಸೂರೆನ್ಸ್ ಯೋಜನೆ, ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಆಯುಷ್ಮಾನ್ ಯೋಜನೆಯಡಿ ೫ ಲಕ್ಷ ರೂ. ಉಚಿತ ಚಿಕಿತ್ಸೆ, ವಿಶ್ವಕರ್ಮ ಯೋಜನೆಯಡಿ ಶೇ. ೯೦ರಷ್ಟು ವಿವಿಧ ಸೌಲಭ್ಯವನ್ನು ಜಾರಿಗೊಳಿಸಿ ಹೊಸ ಬದಲಾವಣೆಯನ್ನೇ ಮೋದಿ ಸರ್ಕಾರ ತಂದಿದೆ ಎಂದು ಬಣ್ಣಿಸಿದರು.
ಚೀನಾ ಹಾಗೂ ಅಮೇರಿಕದಂಥ ಬಲಾಡ್ಯ ದೇಶವನ್ನು ಹಿಂದಿಕ್ಕಲು ಪ್ರತಿ ಭಾರತೀಯರು ದುಡಿಯುವ ಮೂಲಕ ಉತ್ಪಾದಕ ರಾಷ್ಟçವಾದರೆ ವಿಶ್ವದೆದುರು ಭಾರತವು ಮೊದಲ ಸ್ಥಾನ ಪಡೆದುಕೊಳ್ಳಲಿದೆ. ಇಂದಿಗೂ ಪ್ರಪಂಚದ ಅನೇಕ ದೇಶದ ಪ್ರಧಾನಿಗಳು ಮೋದಿಯವರೊಂದಿಗೆ ಸೆಲ್ಫಿ ಕಿಕ್ಲಿಸಿಕೊಳ್ಳಲು ಅವರ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯೇ ಮೂಲ ಕಾರಣವಾಗಿದೆ ಎಂದರು.
ದೇಶದ ನಾಗರಿಕರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಮೋದಿಯವರು ಒಂದೇ ಒಂದು ದಿನವೂ ರಜೆಯನ್ನು ಪಡೆದುಕೊಳ್ಳದೆ ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಇಂದಿಗೂ ಪ್ರಧಾನಿಗಳು ಪ್ರಪಂಚದ ಯಾವುದೇ ದೇಶಕ್ಕೆ ತೆರಳಿದರೂ ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳು, ಮೋದಿ ಮೋದಿ ಎಂಬ ಅಭಿಮಾನದ ಕೂಗುಗಳು ಕೇಳಿಬರುತ್ತಿವೆ ಎಂದು ತಿಳಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಸೆ. ೧೭ರಿಂದ ಆರಂಭ ಗೊಂಡ ಸೇವಾ ಪಾಕ್ಷಿಕ ಅಭಿಯಾನವು ಆರು ಕಡೆಗಳಲ್ಲಿ ರಕ್ತದಾನ ಶಿಬಿರ, ಎರಡು ಕಡೆ ಆರೋಗ್ಯ ಶಿಬಿರ ಆಯೋಜಿಸುವ ಮುಖೇನಾ ಮೋದಿಯವರ ಜನ್ಮದಿನವನ್ನು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಗುಜರಾತಿನ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೋದಿ ಅವರ ರಾಜಕಾರಣದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ. ಭ್ರಷ್ಟಚಾರದ ಆರೋಪವಿಲ್ಲದೇ, ಜನಪ್ರಿಯ ಪ್ರಧಾನ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದೆ ಭಾರತವು ವಿಶ್ವದ ನಂ. ೧ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಜೀವನ್ ರಂಗನಾಥ್, ಜನಸಾಮಾನ್ಯರ ಆರೋಗ್ಯ ಸುಧಾರಿಸಲು ಅವಶ್ಯವಿರುವ ರಕ್ತದಾನಿಗಳಿಗೆ ನೆರವಾಗಲು ಶಿಬಿರವನ್ನು ಮೋದಿಯವರ ಜನ್ಮದಿನದಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ಗೋಪಿ, ಮುಖಂಡರಾದ ಪಾಂಡುರAಗ, ಬಿ.ಸಿ.ಪುನೀತ್, ಪಾರ್ಥೀಬನ್, ಕಿಶೋರ್, ತಿಲಕ್, ಪುನೀತ್ ದೇವಾಂಗ, ಎಸ್‌ಡಿಎಂ ಮಂಜು, ಜಗದೀಶ್ ಮತ್ತಿತರರಿದ್ದರು.