ವಿಶ್ವದಲ್ಲೇ ಭಾರತ ಸಂವಿಧಾನ ಶ್ರೇಷ್ಠ

Constitution of India, Dr. B.R. Ambedkar, District Administration, Taluka Administration, Dhulakheda,
ಧೂಳಖೇಡ ಗ್ರಾಮದಲ್ಲಿ ಸಂವಿಧಾನ ಪೀಠಿಕೆ, ಬಾಬಾಸಾಹೇಬ ಅಂಬೇಡ್ಕರ್ ಕಂಚಿನ ಪುತ್ಥಳಿ ಮೆರವಣಿಗೆ ಮಾಡಲಾಯಿತು. ಜಿ.ಎಸ್.ಕಾಂಬಳೆ, ದಿಲೀಪ ಶಿವಶರಣ, ಸುರೇಶಗೌಡ ಪಾಟೀಲ ಇತರರಿದ್ದರು.
Published on

ಧೂಳಖೇಡ: ನಾವೆಲ್ಲರೂ ಒಂದು ಸುವ್ಯಸ್ಥಿತ ರೀತಿಯಲ್ಲಿ ಜೀವನ ಸಾಗಿಸಲು ಸಂವಿಧಾನವೇ ಕಾರಣವಾಗಿದೆ. ನಮ್ಮ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾಗಿದ್ದು ಎಲ್ಲರೂ ಅದನ್ನು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಮುಖಂಡ ಜಿ.ಎಸ್.ಕಾಂಬಳೆ ಹೇಳಿದರು.ಗ್ರಾಮದಲ್ಲಿ ಭಾನುವಾರ

ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಅವರು ದೇಶದ ಎಲ್ಲ ನಾಗರಿಕರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾನತೆ ಜೀವನ ಒದಗಿಸಲು ಶ್ರಮಿಸಿದ್ದಾರೆ. ಕಾನೂನಿನ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಕೊಡುಗೆ ನೀಡಿದ್ದಾರೆ. ದೇಶದ ಬುಡಕಟ್ಟು ಜನಾಂಗಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯಬೇಕು ಎಂದರು.

ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ, ಸಿ.ಬಿ.ಕುಂಬಾರ, ಡಾ.ಎಂ.ಎಸ್.ಗಂಗನಹಳ್ಳಿ, ಸಮಾಜಕಲ್ಯಾಣಾಧಿಕಾರಿ ಬಿ.ಜೆ.ಇಂಡಿ, ಚಡಚಣ ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಅನೀಲ ಹಳ್ಳಿ, ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ, ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಗ್ರಾಪಂ ಮಾಜಿ ಅಧ್ಯಕ್ಷ- ಹಾಲಿ ಸದಸ್ಯ ಸುರೇಶಗೌಡ ಪಾಟೀಲ, ಪಿಡಿಒ ಶಶಿಕಲಾ ಕೆಂಗಲಗುತ್ತಿ, ಕಾರ್ಯದರ್ಶಿ ಪರಮೇಶ್ವರ ತಳವಾರ, ಮುಖ್ಯಗುರು ಗುರುನಾಥ ರೇವತಗಾಂವ, ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಕೋಳಿ, ಸಾವಿತ್ರಿ ವಾಲಿಕಾರ, ರಮೇಶ ನಾಯಕ ಹಾಗೂ ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಎಲ್ಲ ಶಾಲೆಯ ವಿದ್ಯಾರ್ಥಿಗಳು, ಸಹಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net