ವಿಶ್ವದಲ್ಲೇ ಪ್ರಬುದ್ಧ ಸಂವಿಧಾನ ನಮ್ಮದು

26BLK1
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಭಾಲ್ಕಿ: ವಿಶ್ವದ ಅತ್ಯಂತ ಪ್ರಬುದ್ಧ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಪುರಭವನದಲ್ಲಿ (ಟೌನ್‌ಹಾಲ್), ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವದ ಅತಿ ವಿಸ್ತ್ರತ ಸಂವಿಧಾನ ನಮ್ಮದು. ನಮ್ಮ ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಸಮಿತಿ ಅಧ್ಯಕ್ಷ ತಿಪ್ಪಣ್ಣ ಶಿವಪೂರೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಡಾ.ಕಾಶೀನಾಥ ಚಲವಾ, ಡಾ.ಐ.ಎಸ್.ವಿದ್ಯಾಸಾಗರ, ಅಮೃತರಾವ ಚಿಮಕೋಡೆ ಉಪನ್ಯಾಸ ನೀಡಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀದೇವಿ ಪಾಟೀಲ್, ಸತೀಶಕುಮಾರ ಸಂಗನ, ಬಸವರಾಜ ಮಸಾಜಿ, ಜ್ಞಾನೇಶ್ವರ ಮಂಡೆ, ಶ್ರೀನಿವಾಸ ಬಾಳುವಾಲೆ, ಮಾರುತಿ ಮಂಗಲಗಿ, ಮಲ್ಲಿಕಾರ್ಜುನ ಕಾಂಬಳೆ, ಸೂರ್ಯಕಾಂತ ವಾಡೇಕರ್, ಟಿ.ಎಂ.ಮಲ್ಲಿಕಾರ್ಜುನ, ಲಕ್ಷ್ಮಣ ಕಾಂಬಳೆ, ಪ್ರವೀಣ ಮೋರೆ, ಡಾ.ಶರಣಪ್ಪ ಮುಡಬಿಕರ, ವಿಜಯಮಾಲಾ ವಗ್ಗೆ, ಗೌತಮ ಸೋಮವಂಶಿ, ದೇವಿಂದ್ರ ಸೇರಿ ಹಲವು ಸಾಧಕರಿಗೆ ಸನ್ಮಾನಿಸಲಾಯಿತು.

ಪುರಸಭೆಯ ಅಶೋಕ ಗಾಯಕವಾಡ, ಓಂಕಾರ ಮೋರೆ, ಪ್ರಕಾಶ ಭಾವಿಕಟ್ಟಿ, ಮನೋಹರ ಹೊಳಕರ, ಮಲ್ಲಿನಾಥ ಸಜ್ಜನ, ಡಿ.ಡಿ.ಸಿಂಧೆ, ಸುಮಂತ ಕಟ್ಟಿಮನಿ, ಬಾಲಾಜಿ ಕಾಂಬಳೆ, ಭೀಮಣ್ಣ ಕೊಂಕಣೆ, ರಾಜಕುಮಾರ ಬರಸೂರೆ, ಸರಿತಾಕುಮಾರಿ, ನಿರಂಜಪ್ಪ ಪಾತ್ರೆ, ಎಂ.ಎಸ್.ಮನೋಹರ, ಜಯರಾಜ ದಾಬಶೆಟ್ಟಿ ಇತರರಿದ್ದರು. ಕಾಶೀನಾಥ ಚಲವಾ ಸ್ವಾಗತಿಸಿದರು. ಗಣಪತಿ ಭಕ್ತಾ ನಿರೂಪಣೆ ಮಾಡಿದರು. ಸರಿತಾ ಕುಮಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net