ವಿಶ್ವದಲ್ಲಿ  ಹೆಚ್ಚು ವಸ್ತು ಗುರುತಿಸಿದ ಮೊದಲ ಮಗು ಎಂಬ ಕೀರ್ತಿಗೆ ಮನಸ್ಮಿತಾಗೆ ಪ್ರಶಸ್ತಿ

mysore
Published on

ಮೈಸೂರು: ಚಿಕ್ಕಮಗಳೂರು ಜಿಲ್ಲೆಯ ಮಳಲೂರಿನ ಕಂಬಿಹಳ್ಳಿ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿರುವ ಡಿ.ಎಂ. ಧನಲಕ್ಷ್ಮೀಕುಮಾರಿ ಮತ್ತು ಕೆ.ಹುಲಿಯಪ್ಪಗೌಡ ಅವರ 2 ವರ್ಷದ ಮಗು ಮನಸ್ಮಿತಾ ಅವರಿಗೆ 2025ನೇ ಸಾಲಿನ ರಾಜ್ಯ ಮಟ್ಟದ ಭೈರವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವದಲ್ಲಿ ಅತಿ ಹೆಚ್ಚು ವಸ್ತುಗಳನ್ನು ಗುರುತಿಸಿದ ಮೊದಲ ಮಗು ಎಂಬ ಕೀರ್ತಿಗೆ ಮನಸ್ಮಿತಾ ಪಾತ್ರರಾಗಿದ್ದಾರೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 80ನೇ ಜಯಂತ್ಯುತ್ಸವದ ಪ್ರಯುಕ್ತ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ಚುಂಚಾದ್ರಿ ಮಾತೃ ಸಂಗಮ ಸಮಾವೇಶದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮನಸ್ಮಿತಾ ಕೇವಲ 14 ತಿಂಗಳಿಗೆ ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಗಳು, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, 27 ಹಣ್ಣುಗಳು, 12 ಆಕಾರಗಳು, 32 ಕಾಡು ಪ್ರಾಣಿಗಳು, 20 ಸಾಕು ಪ್ರಾಣಿಗಳು, 27 ಪಕ್ಷಿಗಳು, 27 ತರಕಾರಿಗಳು, 21 ಹೂವುಗಳು, 29 ಕಾಸ್ಮೆಟಿಕ್ಸ್, 135 ಹೌಸ್ ಹೋಲ್ಡ್ ವಸ್ತುಗಳು, 11 ಭಾರತೀಯ ಕರೆನ್ಸಿ, 23 ಆಟಿಕೆಗಳ ಹೆಸರುಗಳು, 20 ಸಮುದ್ರದಲ್ಲಿ ಸಿಗುವ ವಸ್ತುಗಳು, 11 ಹಿಂದು ದೇವರು, 14 ಸಸ್ಯಗಳು, 25 ಎಲೆಗಳು, 24 ಆಹಾರ ವಸ್ತುಗಳು, 22 ಸ್ಟೇಷನರಿ ವಸ್ತುಗಳು, 16ಎಲೆಕ್ಟ್ರಾನಿಕ್ ವಸ್ತುಗಳು, 12 ಬಣ್ಣಗಳು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳು,

11 ಕ್ರಿಯೆಗಳು, 22 ಆಭರಣಗಳು, 19 ದೇಹದ ಭಾಗಗಳು, 30 ಸ್ವಾತಂತ್ರ್ಯ ಹೋರಾಟಗಾರರು, 24 ಭಾರತದಲ್ಲಿನ ಐತಿಹಾಸಿಕ ಸ್ಥಳಗಳು, 27 ಕರ್ನಾಟಕದಲ್ಲಿನ ಐತಿಹಾಸಿಕ ಸ್ಥಳಗಳು, 34 ಪ್ರಸಿದ್ಧ ಭಾರತೀಯ ವ್ಯಕ್ತಿಗಳು, 14 ವೃತ್ತಿಗಳು, 15 ವಾಹನಗಳು, 15 ವಿಜ್ಞಾನಿಗಳು, 4 ಋತುಗಳು, 27 ದೇಶದ ಧ್ವಜಗಳು, 11 ಉತ್ತಮ ಅಭ್ಯಾಸ, 12 ಸಸ್ಯದ ಭಾಗಗಳು, 16 ಪ್ರಯಾಣಕ್ಕೆ ಅಗತ್ಯ ವಸ್ತುಗಳು, 25 ಚಾಕೊಲೇಟ್ ಬ್ರಾೃಂಡ್‌ಗಳು, 25 ಮಗುವಿನ ಅಗತ್ಯ ವಸ್ತುಗಳು, 17 ಕೀಟಗಳು, 14 ಸರಿಸೃಪಗಳು, 13 ಉಭಯಚರಗಳು, 24 ಲಿವಿಂಗ್ ರೂಮ್ ವಸ್ತುಗಳು, 21 ಸಮುದ್ರ ಜೀವಿಗಳು ಒಟ್ಟಾರೆ 1,115 ವಸ್ತುಗಳನ್ನು ಗುರುತಿಸಿದ್ದಾಳೆ.

ಮನಸ್ಮಿತಾ ಇದುವರೆಗೂ 3 ಗ್ಲೋಬಲ್ ಅವಾರ್ಡ್, ಒಂದು ರಾಷ್ಟ್ರ ಪ್ರಶಸ್ತಿ, 2 ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಹಾಗಾಗಿ, ಮನಸ್ಮಿತಾ ಅವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರಾಜ್ಯ ಮಟ್ಟದ ಭೈರವಿ ಪ್ರಶಸ್ತಿ ನೀಡಿ ಆಶೀರ್ವದಿಸಿದರು.

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಉದ್ಯಮಿ ಭಾರತಿ ಶ್ರೀನಿವಾಸ್, ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ, ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net