

ಹುಲಸೂರು: ಕಲಬುರಗಿ ಜಿ¯್ಲÉಯಲ್ಲಿ 2025ರ ಜನವರಿಯಲ್ಲಿ ನಡೆಯಲಿರುವ ಐತಿಹಾಸಿಕ 7ನೇ ಭಾರತೀಯ ಸಂಸ್ಕೃತಿ ಉತ್ಸವ ಎಲ್ಲ ದೇಶಗಳಿಗೂ ಮಾದರಿಯಾಗಲಿದೆ ಎಂದು ಸೇಡಂ ಕೊತ್ತಲ ಬಸವೇಶ್ವರ ದೇವಸ್ಥಾನ ಅಧ್ಯP್ಷÀರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವದ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ್ದ ಅವರು, ಗುರು-ಹಿರಿಯರು, ಮಾತೆಯರು, ಯುವಕರು, ಕಲಾ ತಂಡದವರು ಭಾಗವಹಿಸಿ ಉತ್ಸವ ಯಶಸ್ವಿಗೆ ಕೈಜೋಡಿಸಬೇಕು ಎಂದು ಕೋರಿದರು.
ಸಾನ್ನಿಧ್ಯ ವಹಿಸಿದ್ದ ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಭಾರತೀಯ ಅನನ್ಯ ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸ್ವಾರ್ಥ ಬದಲು ಇತರರಿಗಾಗಿ ಬದುಕುವ ಹಾಗೂ ಬೇರೆಯವರ ಶ್ರೇಯಸ್ಸಿನ ಚಿಂತನೆ ಮಾಡುವ ಯೋಚನೆಗಳು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ವಿಕಾಸ ಆಕಾಡೆಮಿ ಜಿ¯್ಲÁ ಸಹ ಸಂಚಾಲಕ ರೇವಣಸಿದ್ಧ ಜಾಡರ್, ಮುಖ್ಯಗುರು ಸೂರ್ಯಕಾಂತ ಪಾಟೀಲï, ಕಸಾಪ ತಾಲೂಕು ಅಧ್ಯP್ಷÀ ನಾಗರಾಜ ಹಾವಣ್ಣ ಮಾತನಾಡಿದರು.
ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ವಿಕಾಸ ಆಕಾಡೆಮಿ ತಾಲೂಕು ಸಂಚಾಲಕ ಶಿವರಾಜ ಖಪಲೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ, ಪ್ರಮುಖರಾದ ಪ್ರವೀಣ ಕಾಡಾದಿ, ಬಸವರಾಜ ಹಾರಕುಡೆ, ನಾಗೇಶ ಮೇತ್ರೆ, ಶಶಿಕಲಾ ಓಂಕಾರ ಪಟ್ನೆ, ರೇವಣಸಿದ್ಧ ಪಾಟೀಲï, ರಮೇಶ ಧಬಾಲೆ, ಬಸವರಾಜ ಮುಕ್ತಾ, ದಯಾನಂದ ನಿಮಾನೆ, ಗದಗಯ್ಯ ಮಠಪತಿ, ಡಾ.ಧರ್ಮೇಂದ್ರ ಭೋಸ್ಲೆ, ಮಾರುತಿ ಬೇಂದ್ರೆ ಇತರರಿದ್ದರು. ರೂಪೇಶ ಪಂಚಾಳ ಸ್ವಾಗತಿಸಿ ನಿರೂಪಣೆ ಮಾಡಿದರು.
ಇದಕ್ಕೂ ಮುನ್ನ ಪಟ್ಟಣದ ಮುಖ್ಯರಸ್ತೆ ಮೂಲಕ ಬಸವೇಶ್ವರ ಸಂಸ್ಥಾನ ಮಠ , ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠ, ಗಾಂಧಿ ವೃತ್ತ, ಲಕ್ಷಿö್ಮÃ ಚೌಕ್ ಮಾರ್ಗವಾಗಿ ಅಲ್ಲಮಪ್ರಭು ಶೂನ್ಯ ಪೀಠ ಅನುಭವ ಮಂಟಪವರೆಗೆ ಬಾಜಾ-ಭಜಂತ್ರಿಯೊAದಿಗೆ ವೈಭವದ ವಿಕಾಸ ಪಥಯಾತ್ರೆ ನಡೆಯಿತು.