ಕೊಳ್ಳೇಗಾಲ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ವಿಶ್ವಚೇತನ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಗುರುವಾರ ಗಿಡ ನೆಟ್ಟರು.
ಪರಿಸರ ದಿನದ ಮಹತ್ವವನ್ನು ತಿಳಿಸುವ ಜತೆಗೆ ಪರಿಸರ ನಾಶದಿಂದ ಪ್ರಕೃತಿಯ ಅಸಮತೋಲನ, ವಿಕೋಪಗಳ ಬಗ್ಗೆ ಕಾಲೇಜು ಪ್ರಾಂಶುಪಾಲ ಭಾಸ್ಕರ್ ತಿಳಿಸಿದರು. ಸಂಯೋಜಕ ಎಸ್.ಬಿ.ರಾಜೇಶ್ ಮಾತನಾಡಿ, ಪ್ರತಿ ವಿದ್ಯಾರ್ಥಿ ಒಂದು ಗಿಡವನ್ನು ತನ್ನ ಮನೆ ಅಂಗಳದಲ್ಲಿ ನೆಡುವ ಮೂಲಕ ಪರಿಸರ ದಿನ ಆಚರಿಸಬೇಕು ಎಂದು ತಿಳಿಸಿದರು. ವಿದ್ಯಾಸಂಸ್ಥೆಯ ಅಕ್ಬರ್, ಉಪನ್ಯಾಸಕರಾದ ಚೇತನ್, ಜ್ಯೋತಿ ಲಿಂಗಯ್ಯ, ಲಕ್ಷಣ್, ಮಯೂರ, ಪ್ರಕೃತಿ, ಅಂಜಲಿ, ಗಾಯತ್ರಿ, ಅರ್ಚನಾ, ಮೋಹನ್, ಶಿವಣ್ಣ ಇತರರಿದ್ದರು.