

ಅಫಜಲಪುರ: ಜಗತ್ತಿನ 40 ದೇಶಗಳಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘ ಸಕ್ರಿಯವಾಗಿದ್ದು, ಭಾರತವನ್ನು ವಿಶ್ವಗುರುವನ್ನಾಗಿಸಲು ನಿತ್ಯ ಸುಮಾರು 6 ಕೋಟಿ ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸುತ್ತಿz್ದÁರೆ ಎಂದು ಸಂಘದ ವಿಭಾಗ ಪ್ರಚಾರ ಪ್ರಮುಖ ಪ್ರವೀಣ ಕುಲಕರ್ಣಿ ಹೇಳಿದರು.
ಶ್ರೀ ಮಳೇಂದ್ರ ಮಠದ ಆವರಣದಲ್ಲಿ ವಿಜಯದಶಮಿ ನಿಮಿತ್ತ ರಾಷ್ಟಿçÃಯ ಸ್ವಯಂಸೇವಕ ಸಂಘದಿAದ ಭಾನುವಾರ ಸಂಜೆ ಆಯೋಜಿಸಿದ್ದ ಬೌದ್ಧಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವು ಸಮಾಜದಲ್ಲಿ ವಿಲೀನವಾಗಬೇಕಿದೆ. ಆರ್‌ಎಸ್‌ಎಸ್ ಯಾರ ವಿರೋಧಿಯೂ ಅಲ್ಲ. ಯಾರ ವಿರುದ್ಧವೂ ಪ್ರತಿಭಟಿಸಿಲ್ಲ, ಗಲಭೆ ಮಾಡಿಲ್ಲ. ಬದಲಾಗಿ 99 ವರ್ಷ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಹಿಂದು ಸಮಾಜದ ಪ್ರತಿಯೊಬ್ಬರೂ ಜಾಗೃತವಾಗಿ ಕರ್ತವ್ಯವನ್ನು ನಿರ್ವಹಿಸಿದರೆ ಭಾರತ ಜಗದ್ಗುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಇಡೀ ಜಗತ್ತಿಗೆ ಸಂಸ್ಕಾರ ನೀಡಿ ಸನ್ಮಾರ್ಗ ತೋರಿದ್ದು ಭಾರತ, ಆದರೆ ದೇಶದಲ್ಲಿದ್ದು ತಮ್ಮ ಸ್ವಾರ್ಥಕ್ಕಾಗಿ ದ್ರೋಹ ಬಗೆಯುವವರು ಇನ್ನೂ ಇz್ದÁರೆ. ದೇಶ ಸ್ವಾತಂತ್ರö್ಯವಾಗುವ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರು ಬ್ರಿಟೀಷರನ್ನು ಹೊರಗೆ ಹಾಕಿ, ನಾವು ಮಾತ್ರ ದೇಶದ ಚುಕ್ಕಾಣೆ ಹಿಡಿಬೇಕು ಎಂದು ಕುಂತ್ತಿದ್ದರು. ದೇಶದ ಸ್ವಾತಂತ್ರö್ಯ ಸರ್ವವ್ಯಾಪಿಯಾಗಿ ಉಳಿಸಿಕೊಳ್ಳಲು ಸಂಘ ಶ್ರಮಿಸುತ್ತಿದೆ. ದೇಶದಲ್ಲಿ ಹಿಂದು ಧರ್ಮ ಚೈತನ್ಯದಿಂದಿರಲು ಶಾಖೆಗಳು ಕಾರಣ ಎಂದು ಹೇಳಿದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ.ಎಂ.ಎಸ್. ಜೋಗದ ಮಾತನಾಡಿದರು.
ಬಿಜೆಪಿ ತಾಲೂಕು ಅಧ್ಯP್ಷÀ ವಿದ್ಯಾಧರ ಮಂಗಳೂರೆ, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಪ್ರಮುಖರಾದ ಮಲ್ಲಿಕಾರ್ಜುನ ನಿಂಗದಳ್ಳಿ, ದತ್ತು ಬೋಳಶೆಟ್ಟಿ, ಸಿದ್ದು ಖೇಡ, ಸುನೀಲ ಶೆಟ್ಟಿ, ಮಹಾದೇವ ಕಲಶೆಟ್ಟಿ, ಸುನೀಲ ದೇಸಾಯಿ, ಶಿವರಾಜ ಗಂಗನಳ್ಳಿ, ಶರಣು ಪದಕಿ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೇಂದ್ರಕರ, ಮಲ್ಲು ಜಯಗೊಂಡ, ವಿನೋದ ಸುತಾರ್, ಸುಮಿತ್ ಕುಲಕರ್ಣಿ ಇತರರಿದ್ದರು.
ಆಕರ್ಷಕ ಪಥಸಂಚಲನ: ವಿಜಯದಶಮಿ ನಿಮಿತ್ತ ಅಫಜಲಪುರದ ಪ್ರಮುಖ ಬೀದಿಗಳಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಂದ ಭಾನುವಾರ ಆಕರ್ಷಕ ಪಥಸಂಚಲನ ನಡೆಯಿತು. ಶ್ರೀ ಮಳೇಂದ್ರ ಮಠದ ಆವರಣದಲ್ಲಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಚೌಡಿ, ಲಕ್ಷಿö್ಮÃಗುಡಿ, ಅಕ್ಕಮಹಾದೇವಿ ನಗರ, ಬಸವೇಶ್ವರ ನಗರ, ಬಸವ ಸರ್ಕಲ್, ರಾಣಿ ಚನ್ನಮ್ಮ ವೃತ್ತ, ಬಸ್ ನಿಲ್ದಾಣ ಮೂಲಕ ಪುನಃ ಮಳೇಂದ್ರ ಮಠ ತಲುಪಿ ಸಮಾವೇಶಗೊಂಡಿತು. ದಾರಿಯುದ್ದಕ್ಕೂ ಸ್ವಯಂಸೇವಕರನ್ನು ಜನರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲಡೆ ಪುಷ್ಪವೃಷ್ಟಿ ಸುರಿಸಿದರು.