ವಿಶ್ವಕ್ಕೆ ಭಾರತೀಯರ ಕೊಡುಗೆ ಅಪಾರ

web2
ಸವದತ್ತಿಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ, ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಾ.ವಿ.ವಿ.ಬೆಂಗೇರಿ, ಬಸವರಾಜ ಮಜ್ಜಗಿ, ಮಾರುತಿ ದೊಂಬರ, ಪ್ರೊ ಕೆ.ರಾಮರೆಡ್ಡಿ, ಕಾವ್ಯ ಕುದರಿ ಇತರರು ಇದ್ದರು.
Published on

ಸವದತ್ತಿ: ಚಂದ್ರಯಾನ-3 ಸೇರಿ ಹಲವು ಸಾಧನೆಗಳು ವಿಶ್ವದ ಅನೇಕ ದೇಶಗಳು ಭಾರತವನ್ನು ತಿರುಗಿ ನೋಡುವಂತೆ ಮಾಡಿವೆ ಎಂದು ಪ್ರಾಚಾರ್ಯ ಡಾ.ವಿ.ವಿ.ಬೆಂಗೇರಿ ಹೇಳಿದರು.

ಇಲ್ಲಿನ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಜನಸಂಖ್ಯೆಯಲ್ಲಿ ಶೇ. 65 ಯುವಕರೇ ಇದ್ದು, ಕೌಶಲ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ನರಗುಂದ ಬಿಇಒ ಬಸವರಾಜ ಮಜ್ಜಗಿ ಮಾತನಾಡಿ, ಪದವಿ ಓದುವ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸದ ಕಡೆ ಗಮನ ಕೊಡುವುದು ಉತ್ತಮ. ಕಷ್ಟ ಪಟ್ಟು ಬದುಕನ್ನು ರೂಪಿಸಿಕೊಂಡರೆ ಮುಂದಿನ ಜೀವನ ಸುಖಮಯವಾಗಿರುತ್ತೆ ಎಂದರು.

ಶೈಕ್ಷಣಿಕ, ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೂರು ವರ್ಷ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಉತ್ತಮ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಚಾರ್ಯ ಮಾರುತಿ ದೊಂಬರ, ಪ್ರೊ ಕೆ.ರಾಮರೆಡ್ಡಿ, ಕಾವ್ಯ ಕುದರಿ, ಎ.ಎ.ಹಳ್ಳೂರ, ಡಾ.ಎನ್.ಆರ್.ಸವತೀಕರ, ಎಂ.ಸಿ.ಹಾದಿಮನಿ, ಡಾ.ಎ.ಎಫ್.ಬದಾಮಿ, ಡಾ.ಎನ್.ಎ.ಕೌಜಗೇರಿ, ವಿ.ಎಸ್.ಮೀಶಿ, ಡಾ.ವಿ.ವಿ.ಬೆಂಗೇರಿ, ಬಸವರಾಜ ಮಜ್ಜಗಿ, ರಾಜಶೇಖರ ನಿಡವಣಿ, ಎಂ.ಜಿ.ವಟ್ನಾಳ, ಯುನಿವರ್ಸಿಟಿ ಬ್ಲೂ ಆದ ಯಶವಂತ ತೋರಗಲ್ಲ, ಫಾರುಕ್ ಹಿಂದಿನಮನಿ, ಶಿವಾನಂದ ಹೊಳಿ, ಸುನಂದಾ ಹಟ್ಟಿ, ವಚನಾ ಬಸಿಡೋಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net