ವಿಶ್ವಕಲ್ಯಾಣ ಬಯಸುವ ಭಾಷೆ ಸಂಸ್ಕೃತ

sri sansrii
ಶೃಂಗೇರಿಯಲ್ಲಿ ಆಯೋಜಿಸಿರುವ ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ ಮಹಿಳೆಯರು ಭಾಗವಹಿಸಿದ್ದರು. ರೋಹಿಣಿ, ಲಕ್ಷ್ಮೀ, ಅರ್ಜುನ್, ಪ್ರಣವ್, ಶ್ರೀವಿದ್ಯಾ ಇತರರಿದ್ದರು.
Published on

ಶೃಂಗೇರಿ: ಸಂಸ್ಕೃತವು ಭಾರತೀಯರ ಭಾಷೆ. ವಿಶ್ವಕಲ್ಯಾಣ ಬಯಸುವ ಈ ಭಾಷೆ ನಮ್ಮ ಸಂಸ್ಕೃತಿಯ ಮೌಲ್ಯ ಹೆಚ್ಚಿಸುವಲ್ಲಿ ಕೊಡುಗೆ ನೀಡುತ್ತಿದೆ ಎಂದು ಸಂಸ್ಕೃತ ವಿದ್ವಾಂಸ ಡಾ. ಮಹೇಶ್ ಕಾಕತ್ಕರ್ ತಿಳಿಸಿದರು.

ಸಂಸ್ಕೃತ ಭಾರತೀ ಕಚೇರಿಯಲ್ಲಿ ಶುಕ್ರವಾರ ಹತ್ತು ದಿನಗಳ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತ ಭಾಷೆ ಪ್ರಾಚೀನ ಭಾರತದಲ್ಲಿ ಪ್ರಾರಂಭಗೊಂಡಿದ್ದು, ವಿಶ್ವದ ಅತ್ಯಂತ ಹಳೆಯ ಭಾಷೆ. ಸಂಸ್ಕೃತದಲ್ಲಿ ರಚಿಸಿದ ಸಾಕಷ್ಟು ಗ್ರಂಥಗಳು ಜ್ಞಾನ ಬೆಳೆಸುವಲ್ಲಿ ಅತ್ಯಂತ ಸಹಕಾರಿ. ಬಹಳಷ್ಟು ಕಾಲದ ಹಿಂದೆ ಭಾರತದಲ್ಲಿ ಸಂಸ್ಕೃತದಲ್ಲೇ ವ್ಯವಹರಿಸುತ್ತಿದ್ದರು. ನಮ್ಮ ಎಲ್ಲ ಧರ್ಮ ಗ್ರಂಥಗಳೂ ಸಂಸ್ಕೃತದಲ್ಲಿದ್ದವು. ಈ ಮಹೋನ್ನತ ಭಾಷೆ ಜನಸಾಮಾನ್ಯರನ್ನು ತಲುಪಬೇಕಿದೆ. ಹತ್ತು ದಿನಗಳ ಸಂಭಾಷಣಾ ಶಿಬಿರವನ್ನು ಶ್ರೀವಿದ್ಯಾ ನಡೆಸಿಕೊಡುತ್ತಿದ್ದು, ಇದರ ಸದುಪಯೋಗವನ್ನು ಸರ್ವರೂ ಪಡೆಯಬೇಕು ಎಂದರು.

ಪ್ರಾಧ್ಯಾಪಕಿ ಜ್ಯೋತಿ ಕಾಕತ್ಕರ್, ರೋಹಿಣಿ, ನಟರಾಜನ್, ಲಕ್ಷ್ಮೀ, ಪ್ರತಿಭಾ, ಅರ್ಜುನ್, ಪ್ರಣವ್, ಸಿರಿ, ಪೂರ್ಣಿಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net