ವಿಶ್ವಕರ್ಮ ಪ್ರತಿಭಾ ಪುರಸ್ಕಾರ 18ಕ್ಕೆ

Chandarashekar pattar
Published on

ಕಲಬುರಗಿ: ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದಿAದ ಆ.೧೮ರಂದು ಬೆಳಗ್ಗೆ ೧೦.೩೦ಕ್ಕೆ ೨೦೨೩-೨೪ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕೆ.ಪತ್ತಾರ ತಿಳಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಶೇ.೭೫, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವಿಶ್ವಕರ್ಮ ಸಮಾಜದ ಡಾ.ರಾಜಣ್ಣ, ಖ್ಯಾತ ಮನೋ ವೈದ್ಯ ಡಾ.ಸಿ.ಆರ್.ಚಂದ್ರಶೇಖರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿz್ದÁರೆ. ಜಿ¯್ಲೆಯ ಸಮಾಜದ ಹಿರಿಯರು ಪಾಲ್ಗೊಳ್ಳಲಿz್ದÁರೆ ಎಂದು ಹೇಳಿದರು.
ಬೇಡಿಕೆ ಈಡೇರಿಸಲು ಮನವಿ: ಸರ್ಕಾರ ಜಿಲ್ಲೆಯಲ್ಲಿ ಪಂಚಕಸಬುಗಳಿಗಾಗಿ ಕಲಾ ಭವನ ನಿರ್ಮಿಸಬೇಕು, ಪಂಚಶಿಲ್ಪಗಳ ಅಧಿಕೃತ ಮಾರಾಟ ಮಳಿಗೆ, ವಿಶ್ವಕರ್ಮ ವಿದ್ಯಾರ್ಥಿ ವಸತಿ ನಿಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಐದು ಎಕರೆ ನಿವೇಶನ ನೀಡಬೇಕು, ಸರ್ಕಾರದಿಂದ ಹಲವು ಸಮಾಜಗಳಿಗೆ ನಿವೇಶನ ನೀಡಲಾಗಿದೆ, ಸಕಲರ ಅಭಿವೃದ್ಧಿಗೆ ದೇಶದ ಸಂಸ್ಕೃತಿಗೆ ದುಡಿಯುತ್ತಿರುವ ವಿಶ್ವಕರ್ಮ ಸಮಾಜಕ್ಕೆ ಸರ್ಕಾರದಿಂದ ಐದು ಎಕರೆ ನಿವೇಶನ ಶೀಘ್ರ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಡಾ.ಕೆ.ಮೋನಪ್ಪ, ಗಂಗಾಧರ ಬೆಣ್ಣೆಸಿರೂರ, ಶ್ರೀದೇವಿ, ಶಶಿಕಲಾ, ಪ್ರಾಣೇಶ ಬಡಿಗೇರ, ಜನಾರ್ಧನ ಹೇಮನೂರ, ಅಶೋಕ ಪತ್ತಾರ, ಚಿತ್ರಲೇಖಾ ಟೆಂಗಳಿಕರ, ರೇಣುಕಾ ಸುತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net