ವಿಶ್ವಕರ್ಮ, ನಾರಾಯಣಗುರು ಜಯಂತಿ ಆಚರಣೆ

17blrp1
Published on

ಬೇಲೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಮಹರ್ಷಿ ನಾರಾಯಣಗುರು ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಸಕ ಕೆ.ಎಸ್.ಲಿಂಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ತರುವ ಜತೆಗೆ ಮೌಢ್ಯದ ವಿರುದ್ಧ ಸಮರ ಸಾರಿ ಕೋಟ್ಯಂತರ ಜನರ ಬದುಕಿನಲ್ಲಿ ಬೆಳಕು ಮೂಡಿಸಿದವರು ನಾರಾಯಣ ಗುರುಗಳು ಎಂದು ಸ್ಮರಿಸಿದರು.

ಇಂದು ವಿಶ್ವಕರ್ಮರಿಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಈ ಸಮಾಜದಲ್ಲಿ ಇನ್ನೂ ಸಾಕಷ್ಟು ಬಡವರಿದ್ದಾರೆ. ಅವರಿಗೆ ನೆರವಾಗುವುದಕ್ಕೆ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿದರು. ತಹಸೀಲ್ದಾರ್ ನಟೇಶ್, ಮಹರ್ಷಿ ನಾರಾಯಣಗುರು ಸಮಾಜದ ಮಂಜುನಾಥ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಪುರುಷೋತ್ತಮಾಚಾರ್, ಹಿತೇಶ್‌ಸಚ್ಚಾನಿಯ, ನಾರಾಯಣಾಚಾರ್, ವಿಶ್ವನಾಥಾಚಾರ್, ಪರ್ವತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net