ವಿಶ್ವಕರ್ಮ ಒಂದು ಸಮುದಾಯವಲ್ಲ, ಸಾಂಸ್ಕೃತಿಕ ನೆಲೆಗಟ್ಟು

17 yerriswamy 09
Published on

ಬಳ್ಳಾರಿ : ನಾಡು-ನುಡಿ, ಸಂಸ್ಕಾರ-ಸಂಸ್ಕ್ರತಿಯನ್ನು ಅನುಸರಿಸುವ ವಿಶ್ವಕರ್ಮವು ಒಂದು ಸಮುದಾಯವಲ್ಲ, ಅದು ಸಾಂಸ್ಕ್ರತಿಕ ನೆಲೆಗಟ್ಟು ಆಗಿದೆ ಎಂದು ಪ್ರೊ. ಬಡಿಗೇರ ಮೌನೇಶ ಹೇಳಿದರು.
ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಶ್ರೀವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಾನು ದೇವತೆಗಳನ್ನು ಸೃಷ್ಟಿಮಾಡುವ ಭಕ್ತಿ-ಶಕ್ತಿ ವಿಶ್ವಕರ್ಮ ಸಮುದಾಯದರಲ್ಲಿದ್ದು, ಯಾವುದೇ ಬೇದ ಭಾವವಿಲ್ಲದೆ ಹಾಗೂ ತಾವು ಮಾಡುವ ಕಾರ್ಯಗಳಿಗೆ ಅಪೇಕ್ಷೆ ಪಡದೆ ಪ್ರಾಮಾಣಿಕವಾಗಿ ಜೀವನ ನಡೆಸುತ್ತಾರೆ ಎಂದರು. ವಿಶ್ವಕರ್ಮ ಎನ್ನುವ ಪದದಲ್ಲಿ ಸಕರಾತ್ಮಕ ತತ್ವವಿದೆ. ಪ್ರಕೃತಿ ಎನ್ನುವುದು ವಸ್ತು ಸಾಮಾಗ್ರಿಯಲ್ಲ, ಮನಸ್ಸು ಚೈತನ್ಯಗೊಳಿಸುವ ಅಂಶವಾಗಿದೆ ಎಂದು ಮನಗಾಣಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮಾತನಾಡಿದರು. ಬಳಿಕ ಡಿ. ಪುರುಷೋತ್ತಮ ಅವರ ಭಕ್ತಿ ಸಂಗೀತಕ್ಕೆ ನೆರೆದಿದ್ದವರಿಂದ ಚಪ್ಪಾಳೆಗೈದೆರು.
ಶ್ರೀವಿಶ್ವಕರ್ಮ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಶ್ರೀವಿಶ್ವಕರ್ಮ ಭಾವಚಿತ್ರದ ಮೂಲಕ ಕಾಳಿಕಾ ಕಮಠೇಶ್ವರ ದೇವಸ್ಥಾನದಿಂದ ಆರಂಭಗೊಂಡು ವಿವಿಧ ಕಲಾ ತಂಡಗಳ ವಾದ್ಯಗಳೊಂದಿಗೆ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂದು ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net