ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹ 300 ಕೋಟಿ ಬೇಡಿಕೆ

Babu pattar
Published on

ಬೀದರ್: ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ರೂ. 300 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷ ಬಾಬು ಪತ್ತಾರ್ ಹೇಳಿದರು.

ನಿಗಮಕ್ಕೆ ಈ ಹಿಂದಿನ ಸರ್ಕಾರ ಕಮ್ಮಿ ಅನುದಾನ ಒದಗಿಸಿದ ಕಾರಣ ಸಮಾಜ ಬಾಂಧವರಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬರುವ ಬಜೆಟ್ ನಲ್ಲಿ 300 ಕೋಟಿ ರೂ. ಒದಗಿಸಲು ಸಿಎಂ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವಕರ್ಮ ಸಮಾಜದವರು ಪಂಚ ಕಸುಬುಗಳಲ್ಲಿ ತೊಡಗಿದ್ದಾರೆ. ಆದರೆ ಅವರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯದಲ್ಲಿ ಸಮಾಜದವರು ಮುಂದುವರೆಯುವಂತೆ ಮಾಡಲು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿರುವೆ. ಬರುವ ದಿನಗಳಲ್ಲಿ ಸಮಾಜದ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಹಾಕಿಕೊಂಡು ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸನ್ಮಾನ: ನಗರದ ಗುಂಪಾ ಎದುರಿನ ಮೌನೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ತಾರ್ ಅವರಿಗೆ ವಿಶ್ವಕರ್ಮ ಸಮಾಜದಿಂದ ಸತ್ಕರಿಸಲಾಯಿತು. ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಹಣಮಂತ ಬುಳ್ಳಾ, ಚಂದ್ರಕಲಾ ವಿಶ್ವಕರ್ಮ, ಮಹೇಶ ಪಂಚಾಳ, ಅಣ್ಣೆಪ್ಪ ಮಂಗಲಗಿ, ನಾರಾಯಣರಾವ ಕೌಡಗಾಂವ, ಸುಭಾಷ ಪಾಂಚಾಳ, ರಮೇಶ ವಿಶ್ವಕರ್ಮ, ಶ್ರೀನಿವಾಸ ವಿಶ್ವಕರ್ಮ, ವೀರೇಂದ್ರ ಇನಾಂದಾರ್, ಬಾಬು ಚಿಮಕೋಡ, ಸುಧಾಕರ ಪಂಚಾಳ, ದತ್ತಾತ್ರಿ ಪಂಚಾಳ, ವಿಜಯಕುಮಾರ ಪಂಚಾಳ, ಬಲಭೀಮರಾವ, ದತ್ತು ವಿಶ್ವಕರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net