ವಿಶ್ವ ಶಾಂತಿಗಾಗಿ ಜ್ವಾಲಾಮಾಲಿನಿ ದೇವಿ ಅನುಗ್ರಹ

nrp basthimatta
ಎನ್.ಆರ್.ಪುರದ ಬಸ್ತಿಮಠದಲ್ಲಿ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಎನ್.ಆರ್.ಪುರ: ಪ್ರಪಂಚದ ಎಲ್ಲ ಜನರೂ ಸುಖವಾಗಿ ಬಾಳುವಂತಾಗಲಿ ಎಂದು ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಆಶಿಸಿದರು.

ಬಸ್ತಿಮಠದಲ್ಲಿ ಸ್ವಸ್ತಿಶ್ರೀಗಳ ಪರಂಪರಾಗತ ಸದ್ದರ್ಮ ಸಿಂಹಾಸನ ಪೀಠಾರೋಹಣ ಮಾಡಿ ಧರ್ಮೋಪದೇಶ ನೀಡಿ, ಕಲಿಯುಗದಲ್ಲಿ ಏರಿಳಿತಗಳು, ಸುಖ, ಕಷ್ಟ ಸಾಮಾನ್ಯವಾಗಿರುತ್ತದೆ. ಇದನ್ನು ಉತ ಸರ್ಪಿಣಿ ಮತ್ತು ಅವ ಸರ್ಪಿಣಿ ಎಂದು ಕರೆಯಲಾಗುವುದು. ಇಂತಹ ಸಮಯದಲ್ಲಿ ಜಗನ್ಮಾತೆ ಜ್ವಾಲಾಮಾಲಿನಿ ದೇವಿಯ ಅನುಗ್ರಹವಿರುತ್ತದೆ ಎಂದರು. ಕ್ಷೇತ್ರದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕ್ಷೇತ್ರದ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಪೂರ್ವ ಪಟ್ಟಾಧೀಶರ ನಿಷಿದಿಯ ಪಾದುಕೆ ಪೂಜೆ ಮತ್ತು ಶ್ರೀಗಳಿಂದ ಪೂರ್ವಾಚಾರ್ಯರ ಪಾದುಕೆಗಳ ಅಷ್ಟದ್ರವ್ಯಾರ್ಚನೆ ಪೂಜೆ ನಡೆಯಿತು. ಪೀಠಾರೋಹಣ ಬಳಿಕ ಶ್ರೀಗಳ ಪಾದಪೂಜೆ ನಡೆಯಿತು. ಸಂಜೆ ರಾಜಬೀದಿಯಲ್ಲಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಉತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net