ವಿಶ್ವ ವಿದ್ಯಾಲಯಕ್ಕೆ ಬಸವಣ್ಣನ ಹೆಸರಿಡಿ

bkt-20-9
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಿಬ್ಬಂದಿಗೆ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಸದಸ್ಯರು ಮನವಿ ಸಲ್ಲಿಸಿದರು.
Published on

ಬಾಗಲಕೋಟೆ: ಲಿಂಗಾಯತ ಧರ್ಮದ ಮಾನ್ಯತೆಗಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮರು ಪ್ರಸ್ತಾವಣೆ ಸಲ್ಲಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಬಸವಣ್ಣನವರ ಐಕ್ಯ ಮಂಟಪಕ್ಕೆ ಉಚಿತ ಪ್ರವೇಶ ನೀಡಬೇಕು, ಕಲಬುರ್ಗಿ ವಿವಿಗೆ ಬಸವಣ್ಣ ಅವರ ಹೆಸರು ಇಡಬೇಕು, ಸರ್ಕಾರ ಬಸವೇಶ್ವರ ಗೌರವ ಕೊಡುವ ನಿಟ್ಟಿನಲ್ಲಿ ಕಾರ್ಯಮಾಡಬೇಕು. ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ವಿಶ್ವಕ್ಕೆ ಗಂಡು-ಹೆಣ್ಣಿನ ಸಮಾನತೆ, ಜಾತಿ, ಲಿಂಗ ಬೇಧ ರಹಿತ ಕಲ್ಯಾಣ ರಾಷ್ಟ್ರ ಕಟ್ಟುವಲ್ಲಿ ಆಶಯಹೊಂದಿದ್ದ ಮಹಾನ್ ವ್ಯಕ್ತಿ ಬಸವಣ್ಣ. ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ನೀಡಿದ ಮೊದಲಿಗ. ೧೨ ಶತಮಾನದಲ್ಲಿ ತಳ ಸಮುದಾಯದವರನ್ನು ಒಗ್ಗೂಡಿಸಿದ್ದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಳವಳಿ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತಂದರು. ಅವರನ್ನು ಮುಂದಿನ ಪೀಳಿಗೆ ಜನರಿಗೆ ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತೆ ಕಾರ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಲುಕ್, ಬಾಗಲಕೋಟೆ ರಾಷ್ಟ್ರೀಯ ಬಸವದಳದ ಮಹಿಳಾ ಅಧ್ಯಕ್ಷ ವಿಮಲಾಬಾಯಿ ಹಾಲಪ್ಪನವರ, ಗುರುಬಸಪ್ಪ ನೀಲುಗಲ್ಲ, ಎಸ್.ಬಿ.ಉಳ್ಳಾಗಡ್ಡಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net