ವಿಶ್ವ ರೇಬಿಸ್ ದಿನಾಚರಣೆ

Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವಿಶ್ವ ರೇಬಿಸ್ ದಿನವನ್ನು ಆಚರಿಸಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಾಶ್ವತ್ ಮಾತನಾಡಿ, ನಾಯಿಕಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸೆ 28ರಂದು ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತಿದೆ. ಈ ವರ್ಷದ ಘೋಷ ವಾಕ್ಯ ರೇಬೀಸ್ ತಡೆಗಟ್ಟೋಣ ನೀವು ನಾನು ನಮ್ಮ ಸಮಾಜ ಎಂಬುದಾಗಿದೆ. ರೇಬಿಸ್ ಕಾಯಿಲೆಯು ನಾಯಿ ಬೆಕ್ಕು ಮುಂತಾದ ರೇಬಿಸ್ ಸೋಂಕಿತ ಪ್ರಾಣಿಗಳು ಕಡಿತ ಪರಚುವಿಕೆಯಿಂದ ಮನುಷ್ಯರಿಗೆ ಹರಡುತ್ತದೆ. ಇಂಥಾ ಸಂದರ್ಭದಲ್ಲಿ ಕೂಡಲೇ ಚಿಕಿತ್ಸೆಯನ್ನು ಪಡೆಯಬೇಕು. ಸೋಂಕಿಗೆ ಒಳಗಾದವರಿಗೆ ನಾಲ್ಕು ವಾರಗಳಲ್ಲಿ ನೀರು ಮತ್ತು ಗಾಳಿಯ ಭಯ ಅತಿಯಾಗಿ ಜೊಲ್ಲು ಸೋರುವಿಕೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಚ್ಚಿದ ಗಾಯವನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ ಐದು ನಿಮಿಷಗಳ ವರೆಗೆ ತೊಳೆಯಬೇಕು ನಂತರ ರೇಬಿಸ್ ಚುಚ್ಚುಮದ್ದನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ಸುದರ್ಶನ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ರೇಣುಕಾದೇವಿ, ಸವಿತಾ, ಶುಶ್ರೂಷಕಿ, ಅಂಬಿಕಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net