ವಿಶ್ವ ಮಾನವತೆ ಸಂದೇಶ ಸಾರಿದ ಕುವೆಂಪು : ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

29 Nela Ph 06 Book Bidukade
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ


ಕನ್ನಡ ಸಾರಸತ್ವ ಲೋಕಕ್ಕೆ ಮೊದಲ ಜ್ಞಾನಪೀಠ ಪಡೆದ ಕುವೆಂಪು ಅವರ ಕಾವ್ಯ, ಕಥೆ, ಕೃತಿ ಕಾದಂಬರಿಗಳು ಕನ್ನಡ ಬಲ್ಲವರಿಗಷ್ಟೆ ಅಲ್ಲದೆ ಅನ್ಯಭಾಷಿಗರನ್ನು ಆಕರ್ಷಿಸಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಬಸ್ ನಿಲ್ದಾಣ ಸಮೀಪದ ಮುಖ್ಯರಸ್ತೆಯಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆಯಲ್ಲಿ ಮಾತನಾಡಿ, ಕುವೆಂಪು ನಾಡಿದ ಶ್ರೇಷ್ಠ ಕವಿ. ಅವರ ಸಾಹಿತ್ಯ ಕೃಷಿ ಅಜರಾಮರ. ಕನ್ನಡ ಭಾಷಾ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿರುವ ಕುವೆಂಪು ಅವರ ಪುತ್ಥಳಿಯನ್ನು ನಗರದಲ್ಲಿ ನಿರ್ಮಾಣ ಮಾಡಬೇಕಿದೆ. ಜತೆಗೆ ವಿಶ್ವ ಮಾನವತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕರ್ತವ್ಯ ಕನ್ನಡಿಗರದ್ದಾಗಿದೆ ಎಂದು ಹೇಳಿದರು.
ವೇದಿಕೆ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ರವಿಕಾಣದ್ದನ್ನು ಕವಿ ಕಂಡಂತೆ ಕುವೆಂಪು ಅವರು ವಿಶ್ವಮಾನವತೆಯ ಸಂದೇಶ ಸಾರಿದ್ದಾರೆ. ಕುವೆಂಪು ಅವರ ಕಾವ್ಯ, ಕಥೆ ಕಾದಂಬರಿಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅವರ ಮಹದಾಸೆಯಂತೆ ಕನ್ನಡ ಭಾಷೆ ಹಿರಿಮೆ, ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡ್ಯೊಯ್ಯಬೇಕಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಕುಂವೆಂಪು ಅವರ ಜೀವನ ಸಂದೇಶಗಳು ಜನ್ಮದಿನಾಚರಣೆಗಷ್ಟೆ ಸೀಮಿವಾಗಬಾರದು ಎಂದು ತಿಳಿಸಿದರು.


ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಹಾಗೆಯೇ ಮಣ್ಣೆ ಮೋಹನ್ ರಚಿತ ಬಾಲಗಾನ ಶಿಶುಗೀತೆಗಳ ಸಂಕಲನವನ್ನು ಸ್ವಾಮೀಜಿ ಲೋಕಾರ್ಪಣೆಗೊಳಿಸಲಾಯಿತು. ಸಂಘಟನೆಯ ಪ್ರಧಾನ ಕಾರ್ಯರ್ಶಿ ಜಗದೀಶ್, ಖಜಾಂಚಿ ನಂದಕುಮಾರ್, ಸಮರಸೇನೆ ಅಧ್ಯಕ್ಷ ಪುಟ್ಟರಾಜು, ವಿದ್ಯಾರ್ಥಿ ಘಟಕ ಅಧ್ಯಕ್ಷ ಮಂಜುನಾಥ್‌ಗೌಡ, ಯುವ ಘಟಕ ಅಧ್ಯಕ್ಷ ಆಕರ್ಷ್, ಕಾರ್ಮಿಕ ಘಟಕ ಅಧ್ಯಕ್ಷ ಉಮೇಶ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ರೆಹಮಾನ್, ನಗರ ಘಟಕ ಅಧ್ಯಕ್ಷ ಯಶವಂತ್, ಪದಾಧಿಕಾರಿಗಳಾದ ಹಮಿದ್, ಪ್ರಕಾಶ್, ರವಿಕುಮಾರ್, ಖಾದರ್, ಮುಖಂಡರಾದ ವೆಂಕಟೇಶ್, ಕೇಶವಮೂರ್ತಿ, ನರಸಿಂಹಮೂರ್ತಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net