

ಚಿತ್ರದುರ್ಗ:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಪದವಿ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಿದೆ.‘ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆ ಪರಿಣಾಮಗ ಳು’ಶೀರ್ಷಿಕೆಯಡಿ ಸ್ಪರ್ಧೆ ಏರ್ಪಡಿಸಲಾಗಿದೆ. ಮೇ 27 ಪ್ರಬಂಧಗಳನ್ನು ಕಳುಹಿಸಲು ಕೊನೇ ದಿನ. ತಂಡ(ಇಬ್ಬರು)ರಸಪ್ರಶ್ನೆ ಸ್ಪರ್ಧೆಗೆ ಭಾಗವ ಹಿಸುವ ವಿದ್ಯಾರ್ಥಿಗಳು 27ರೊಳಗೆ ಅಕಾಡೆಮಿ ksta.gok@gmail.com ಮೂಲಕ ಹೆಸರು ನೋಂದಾಯಿಸಿಕೊಳ್ಳ ಬಹುದು. ಜೂ ನ್ 6ರಂದು ಅಕಾಡೆಮಿ ಸಭಾಂಗಣದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಹಿರಿಯ ವೈಜ್ಞಾನಿಕಾಧಿಕಾರಿ ಡಾ. ಆರ್.ಆನಂದ್(9880405181)ಅವರನ್ನು ಸಂಪರ್ಕಿಸುವಂತೆ ಅಕಾಡೆಮಿ ಸಿಇಒ ಎ.ಎಂ.ರಮೇಶ್ ತಿಳಿಸಿದ್ದಾರೆ.