ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಬೆಳೆಸಿ

5 Dwd 13
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾನವ ಕುಲದ ಆರೋಗ್ಯಕರ ಬದುಕಿಗೆ ಆಸರೆ ನೀಡಿ ಪೋಷಿಸಿ ಬೆಳೆಸುವ ಪರಿಸರದ ಬಗ್ಗೆ ಪ್ರೀತಿ, ಅಭಿಮಾನಗಳನ್ನು ಮಕ್ಕಳಲ್ಲಿ ಶಾಲಾ ಹಂತದಲ್ಲಿ ಬೆಳೆಸಬೇಕು. ಪ್ರತಿ ಮಗುವಿನಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಿಷೇಽತ ಪ್ಲಾಸ್ಟಿಕ್ ಉಪಯೋಗಿಸದಂತೆ ಜನಜಾಗೃತಿ ಕಾರ್ಯ ಮಾಡಬೇಕು. ಮಣ್ಣು, ನೀರು, ಗಾಳಿ ಮತ್ತು ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಮನೆಯಲ್ಲಿ ಜರುಗುವ ಹಬ್ಬ, ಜನ್ಮದಿನ, ಕುಟುಂಬ ಕಾರ್ಯಕ್ರಮಗಳಂದು ಒಂದು ಸಸಿ ನೆಡುವ ಪರಂಪರೆ ಆರಂಭಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ ಸ್ವಾಗತಿಸಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್. ನಾಯಕ್ ನಿರೂಪಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪದಾಧಿಕಾರಿಗಳಾದ ವಿ.ವಿ. ಕಟ್ಟಿ, ಬಸವರಾಜ ಕಡಕೋಳ, ಭಾಗೀರತಿ ತಲಕಾಂಬಕರ, ಎಸ್.ಎನ್. ಸಾವಳಗಿ, ಎಂ.ವಿ. ಅಡಿವೇರ, ಶಾಲಾ ಶಿಕ್ಷಣ ಇಲಾಖೆ ಅಽಕಾರಿಗಳಾದ ಎಸ್.ಎಂ. ಹುಡೇದಮನಿ, ಡಾ. ರೇಣುಕಾ ಅಮಲಝರಿ, ಎಸ್.ಎನ್. ಪೂಜಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net