ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ

21 mlv 2
Published on

ಮಳವಳ್ಳಿ: ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ನಂಜುಂಡೇಗೌಡ ಹೇಳಿದರು.


ತಾಲೂಕಿನ ಕಿರುಗಾವಲು ಸಮೀಪದ ಮಿಕ್ಕೆರೆ ಗ್ರಾಮದ ಮಿಕ್ಕೆರೆ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಕಿರುಗಾವಲು ಮಹಾಶಕ್ತಿ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕೊವೀಡ್ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದೇಶದ ಜನರನ್ನು ರಕ್ಷಿಸಲು ತೆಗೆದುಕೊಂಡ ದೃಢ ನಿರ್ಧಾರಗಳ ಜತೆಗೆ ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ವಿಶ್ವದ ಅಗ್ರಗಣ್ಯ ನಾಯಕರ ಪಟ್ಟಿಯಲ್ಲಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿಯನ್ನು ಟೀಕೆ ಮಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ತಕ್ಕ ಉತ್ತರವನ್ನು ಜನರು ನೀಡದಿದ್ದರೆ ತಂದೆ-ತಾಯಿ, ಹಿರಿಯರಿಗೆ ಹಾಗೂ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.


ಪಕ್ಷದ ತಾಲೂಕು ಸಂಚಾಲಕ ಜಿ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಬಿ.ಸೋಮಶೇಖರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಬಸವರಾಜು, ಮಂಡಲ ಅಧ್ಯಕ್ಷ ಕೃಷ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗೇಗೌಡ, ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಎಸ್ಸಿ ಮೋರ್ಚಾ ಸದಸ್ಯ ರಾಜು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ , ತಾಲೂಕು ಎಸ್ಸಿ, ಎಸ್ಟಿ ಅಧ್ಯಕ್ಷ ಅನಿಲ್, ಬೂತ್ ಅಧ್ಯಕ್ಷರಾದ ಮಹದೇವು, ಮಹೇಶ್, ಮುಖಂಡರಾದ ಯಮದೂರು ಸಿದ್ದರಾಜು, ಕುಮಾರಸ್ವಾಮಿ, ಸುರೇಶ್, ಚಿಕ್ಕಣ್ಣ, ರಾಜೀವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net