ವಿಶ್ವ ಛಾಯಾಗ್ರಹಣ ದಿನಾಚರಣೆಯ ಛಾಯಾಚಿತ್ರ ಸ್ಪರ್ಧೆ ವಿಜೇತರು

Published on

ಮೈಸೂರು: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮೈಸೂರು ಫೋಟೋಗ್ರಾಫಿಕ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆ ವಿಜೇತರನ್ನು ಘೋಷಿಸಲಾಗಿದೆ.
ವನ್ಯಜೀವಿ ವಿಭಾಗದಲ್ಲಿ ಜಿ.ಎಸ್.ರವಿಶಂಕರ್ (ಪ್ರಥಮ), ಎನ್.ಜಯಶೀಲರಾವ್(ದ್ವಿತೀಯ), ಎಸ್.ಅರ್ಜುನ್ (ತೃತೀಯ), ರವಿಶಂಕರ್, ಎಸ್.ಎನ್.ರಾಘವೇಂದ್ರ, ಎಸ್.ಆರ್.ಮಧುಸೂದನ್ (ಸಮಾಧಾನಕರ) ಬಹುಮಾನ ಪಡೆದಿದ್ದಾರೆ.
ನಿಸರ್ಗ ವಿಭಾಗದಲ್ಲಿ ಎನ್.ಜಯಶೀಲರಾವ್ (ಪ್ರಥಮ), ಕೆ.ಜಿ.ಸಿದ್ದಲಿಂಗ ಪ್ರಸಾದ್ (ದ್ವಿತೀಯ), ಆರ್.ಸತೀಶ್ (ತೃತೀಯ), ಎಂ.ಜಿ.ಸತೀಶ್‌ಕುಮಾರ್, ಎಂ.ರೇಣು ಪ್ರಿಯದರ್ಶಿನಿ, ಎಸ್.ಎನ್.ರಾಘವೇಂದ್ರ (ಸಮಾಧಾನಕರ) ಬಹುಮಾನ ಲಭಿಸಿದೆ.
ಚಿತ್ರಾತ್ಮಕ ಚಿತ್ರಗಳ ವಿಭಾಗದಲ್ಲಿ ಜಿ.ಎಸ್.ರವಿಶಂಕರ್ (ಪ್ರಥಮ), ಎನ್.ಜಿ.ಸುಧೀರ್ (ದ್ವಿತೀಯ), ನವೀನ್‌ಕುಮಾರ್ ಪುತ್ತೂರ್ (ತೃತೀಯ), ರವಿಶಂಕರ್, ನವೀನ್‌ಕುಮಾರ್, ಲಕ್ಷ್ಮೀನಾರಾಯಣ ಯಾದವ್ (ಸಮಾಧಾನಕರ) ಬಹುಮಾನ ಬಂದಿದೆ.
ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆ.19 ಮತ್ತು 20ರಂದು ಎರಡು ದಿನ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದ್ದು, ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net