ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಎಬಿವಿಪಿಯಿಂದ ಸೈಕಲ್ ಜಾಥಾ

DSC_0092
Published on

ವಿಜಯಪುರ : ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆಹಾರ ಮತ್ತು ನೀರು ಪೂರೈಸಲು ನಾಗರಿಕರಲ್ಲಿ ಜಾಗೃತಿ ಅಗತ್ಯ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಡಾ.ಎಚ್.ವೆಂಕಟೇಶ ಹೇಳಿದರು.
ನಗರದ ಶಿವಾಜಿ ವೃತ್ತದಿಂದ ಲಿಂಗದಗುಡಿ ಮಾರ್ಗವಾಗಿ ದರಬಾರ ಹೈಸ್ಕೂಲ್ ಆವರಣ ವರೆಗೆ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಪಕ್ಷಿ ಸಂಕುಲದ ಉಳಿವಿಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆ ಆಗಿತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, 'ಹಸಿರು ವಿಜಯಪುರ' ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇವೆ. ಯುವಕರು ಪರಿಸರದ ಬಗ್ಗೆ ಕಾಳಜಿ ಹೊಂದುವವರಾಗಬೇಕು, ತಮ್ಮ ಸುತ್ತಲಿನ ಪರಿಸರವನ್ನು ಹಾಗೂ ಪಕ್ಷಿಗಳ ಸಂಕುಲಕ್ಕೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿ ಕೊಡುವ ಕಾರ್ಯ ಮಾಡಬೇಕು ಎಂದರು.
ಗುಲ್ಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ಬಸವರಾಜ ಯಾದವಾಡ, ಎಬಿವಿಪಿ ಜಿಲ್ಲಾ ಪ್ರಮುಖ ಸೂರ್ಯಕಾಂತ ಬಿರಾದಾರ, ನಗರ ಅಧ್ಯಕ್ಷ ಅಮಿತಕುಮಾರ ಬಿರಾದಾರ, ಮುಖಂಡರಾದ ಬಿ.ಎಸ್.ಬಾಪಗೋಂಡ, ಓಂಕಾರ ನಾವಿ, ಬಸವರಾಜ ಪೂಜಾರಿ, ನಿಂಗಣ್ಣ ಮನಗೂಳಿ, ಬಸವರಾಜ ಲಗಳಿ, ಸಿದ್ದು ಪತ್ತಾರ, ಅಕ್ಷಯ ಯಾದವಾಡ, ಪಾಂಡು ಮೊರೆ, ಮಹಾಂತೇಶ ಕಂಬಾರ, ಮಲ್ಲಿಕಾರ್ಜುನ ಮಾಳಿ, ಸಿದ್ದು ಉಪ್ಪಾರ, ನಾನಾಗೌಡ ಪಾಟೀಲ, ಕಿರಣ ಸಿಂಪಿ, ಮಂಜುನಾಥ ದಾಶ್ಯಾಳ, ಮಂಜುನಾಥ ಹಳ್ಳಿ, ಸುದೀಪ ಯಮದೆ, ಧೀರಜ ಪರಶೆಟ್ಟಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net