ವಿಶ್ವ ಆರ್ಥಿಕ ಶೃಂಗಕ್ಕೆ ಆಯ್ಕೆ

New Project
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ನಲ್ಲಿ ಜ. 21ರಂದು ನಡೆಯಲಿರುವ ವಿಶ್ವ ಆರ್ಥಿಕ ಶೃಂಗ-2025ರಲ್ಲಿ ಫ್ಯೂಯಲ್ (ಎಫ್​ಯುುಇಎಲ್-ಪ್ರೇಂಡ್ಸ್ ಯೂನಿಯನ್ ಫಾರ್ ಎನರ್ಜೆಜಿಂಗ್ ಲೈವ್ಸ್) ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ಹಾಗೂ ಚೇರ್ಮನ್ ಕೇತನ ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ಫ್ಯೂಯಲ್ ಸಂಸ್ಥೆಯು ಯುವ ಕೌಶಲ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಅಲ್ಲಿನ ಸ್ಥಳೀಯ ಸರ್ಕಾರದೊಂದಿಗೆ ನೀತಿ ನಿರೂಪಕರು ಮತ್ತು ಜಾಗತಿಕ ನಾಯಕರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಿದೆ.

ಈಗಾಗಲೇ ಸಂಸ್ಥೆ ಭಾರತದಲ್ಲಿ 2.93 ಲಕ್ಷ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡಿದೆ. 10 ಲಕ್ಷಕ್ಕೂ ಅಧಿಕ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಅಲ್ಲದೇ 3000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net