ವಿಶೇಷಚೇತನರು ಸಾಮಾನ್ಯಗಿಂತಲೂ ಹೆಚ್ಚು ಕೆಲಸ ಮಾಡುವ ಸಮಾರ್ಥ ಹೊಂದಿದ್ದಾರೆ : ಸುರೇಶ್

ವಿಶೇಷಚೇತನರು ಸಾಮಾನ್ಯಗಿಂತಲೂ ಹೆಚ್ಚು ಕೆಲಸ ಮಾಡುವ ಸಮಾರ್ಥ ಹೊಂದಿದ್ದಾರೆ : ಸುರೇಶ್
Published on

ಹಾಸನ: ಸಮರ್ಥನಂ ಅಂಗವಿಕಲರ ಸಂಸ್ಥೆಯು ಬಾರ್ಕ್ಲೇನ್ ಸಹಕಾರದೊಂದಿಗೆ ಯುವ ವಿಕಲಚೇತನರಿಗಾಗಿ ಹಾಸನ ವಿಭಾಗ ಮಟ್ಟದ ಉದ್ಯೋಗ ಮೇಳವನ್ನು ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಲಾಯಿತು. ಸದರಿ ಮೇಳವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುರೇಶ, ಸಮಾಜ ಕಲ್ಯಾಣಾಧಿಕಾರಿ ಎಸ್.ಹೆಚ್. ಲಕ್ಷ್ಮೇಗೌಡ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮ, ಸಮರ್ಥನಂ ಸಂಸ್ಥೆಯ ಸುಭಾಶ್ ಚಂದ್ರ ಹಾಗೂ ಸಿ.ಡಿ.ಪಿ.ಓ ದಿನೇಶ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುರೇಶ ಮಾತನಾಡಿ, ವಿಶೇಷಚೇತನರು ಸಾಮಾನ್ಯ ನಾಗರೀಕರಿಗಿಂತಲೂ ಹೆಚ್ಚು ಕೆಲಸ ಮಾಡುವ ಸಮಾರ್ಥವನ್ನು ಹೊಂದಿದ್ದಾರೆ, ಯಾವುದೇ ಆತಂಕವಿಲ್ಲದೆ ಉತ್ಪಾದನಾ ಕ್ಷೇತ್ರದ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ, ಕೊವಿಡ್ ಇದ್ದ ಕಾರಣ ಎರಡು ವರ್ಷಗಳ ಕಾಲ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಇಂತಹ ಸಂದರ್ಭದಲ್ಲಿ ಸಮರ್ಥನಂ ಸಂಸ್ಥೆ ಉದ್ಯೋಗ ಮೇಳ ಮಾಡುತ್ತಿರುವುದು ಪ್ರಶಂಸೆ ವ್ಯಕ್ತ ಪಡಿಸಿದರು. ವಿಕಲಚೇತನರು ಉದ್ಯಮಿಗಳಾಗಿ ಬೆಳೆದು ಸ್ವಂತ ಕಾಲಿನಲ್ಲಿ ನಿಲ್ಲಿಬೇಕು ಎಂದು ತಿಳಿಸಿದರು.

ಇದಕ್ಕು ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸುಭಾಶ ಚಂದ್ರ, ಸಮರ್ಥನಂ ಸಂಸ್ಥೆಯು ಯುವ ವಿಕಲಚೇತನರ ಸಬಲೀಕರಣ ಮಾಡುವ ಉದ್ದೇಶದಿಂದ ಬಾರ್ಕ್ಲೇನ್ ಸಹಕಾರದೊಂದಿಗೆ ಭಾರತ ದೇಶಾದ್ಯಂತ ಯುವ ವಿಕಲಚೇತನರಿಗಾಗಿ ಸರಣಿ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದೆ. ಸಮರ್ಥನಂ ಅಂಗವಿಕಲ ಸಂಸ್ಥೆಯು 1997 ರಿಂದ ಭಾರತದಲ್ಲಿನ ದೃಷ್ಟಿ ಹೀನರ, ಅಂಗವಿಕಲರ ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ಊನಶಕ್ಥರ ವಯಕ್ತಿಕ ಸ್ವಾವಲಂಬನೆಯನ್ನು ಸಾಧಿಸುವದಾಗಿದೆ ಮತ್ತು ಸಮಾಜದಲ್ಲಿ ತಮ್ಮದೇ ಆಗಿರತಕ್ಕಂತಹ ಪ್ರಮುಖ ಹೆಜ್ಜೆಯನ್ನು ಇಡುವಲ್ಲಿ ಸಹಾಯಮಾಡುವತ್ತ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಇಂದು ವಿಕಲಚೇತನರು ಸವಾರ್ಂಗರಿಗಿಂತ ಎಲ್ಲ ವಿಷಯಗಳಲ್ಲೂ ಮಿಗಿಲಾಗಿದ್ದು, ಅವರ ಪ್ರತಿಭೆ ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ ಎಂದು ಹೇಲಿದರು, ವಿಕಲಚೇತನರು ತೆರಿಗೆ ಕಟ್ಟುವ ಸಾಮರ್ಥ್ಯವನ್ನು ಹೊಂದಬೇಕು, ದೊಡ್ಡ ದೊಡ್ಡ ಉದ್ಯಮಿಗಳಾಗಿ ಬೆಳೆಯಬೇಕು ಎಂದು ತಿಳಿಸಿದರು.

ಸದರಿ ಉದ್ಯೋಗ ಮೇಳಕ್ಕೆ 15ಕ್ಕೂ ಹೆಚ್ಚು ಕಂಪನಿಗಳು, 210 ಕ್ಕೂ ಅಧಿಕ ವಿಕಲಚೇತನ ಅಭ್ಯಾರ್ಥಿಗಳು ಭಾಗವಹಿಸಿದ್ದು 70ಕ್ಕೂ ವಿಕಲಚೇತನರಿಗೆ ಸ್ಥಳದಲ್ಲೇ ಉದ್ಯೋಗ ಅವಕಾಶ ಹಾಗೂ ಎರಡನೇ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಸದರಿ ಕಾರ್ಯಕ್ರಮದಲ್ಲಿ ಮೈಸೂರು ಸಮರ್ಥನಂ ಶಾಖೆಯ ಸಂಯೋಜಕ ಶಿವರಾಜು, ವೀರಭದ್ರಪಾಟೇಲ್, ಅಂತರಾಷ್ಟ್ರೀಯ ಅಂಧ ಕ್ರಿಕೇಟ್ ಆಟಗಾರ ಲೋಕೇಶ್, ಜವರೇಗೌಡ, ರಂಗಸ್ವಾಮಿ, ಮೈಸೂರು ಸುಭಾಶ ಸೇರಿದಂತೆ ಮತ್ತಿತ್ತರು ಭಾಗವಹಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-8123725949, 6364867795,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net