ವಿಶೇಷಚೇತನರಿಗೆ ಹೆಚ್ಚಿನ ಪಿಂಚಣಿಗೆ ಆಗ್ರಹ

24 YERRISWAMY 06
Published on

ಬಳ್ಳಾರಿ : ರಾಜ್ಯದ ವಿಶೇಷಚೇತನರಿಗೆ ಪಿಂಚಣಿ ಹೆಚ್ಚಿಸಿ ಮತ್ತು ಅವರ ಕುಟುಂಬಕ್ಕೂ ಮಾನವೀಯತೆ ಆಧಾರದ ಮೇಲೆ ಆರ್ಥಿಕ ನೆರವಾಗಬೇಕು ಎಂದು ವಿಧಾನಪರಿಷತ್ ಸದಸ್ಯ ವೈ. ಎಂ. ಸತೀಶ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ವಿಧಾನಪರಿಷತ್ತಿನ ಸದನದಲ್ಲಿ ಬುಧವಾರ ಆಗ್ರಹಿಸಿದ್ದಾರೆ. ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿಶೇಷಚೇತನರ ಪಿಂಚಣಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟು 393789.95 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಶೇ. 40 ರಿಂದ 75 ರಷ್ಟು ಅಂಗವಿಕಲತೆ ಇರುವರರಿಗೆ 800 ರೂಪಾಯಿ, ಶೇ. 75 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ 1400 ರೂ. ಮತ್ತು ಶೇ. 75 ರಷ್ಟು ಮನೋವೈಕಲ್ಯತೆ ಇರುವವರಿಗೆ 2000 ರೂ. ಪಿಂಚಣಿಯಾಗಿ ನೀಡಲಾಗುತ್ತಿದೆ ಎಂದು ಉತ್ತರಿಸಿದರು.
ವೈ.ಎಂ. ಸತೀಶ್ ಅವರು ಶೇ. 75 ರಷ್ಟು ಮನೋವೈಕಲ್ಯತೆಯನ್ನು ಹೊಂದಿರುವ ಮತ್ತು ಈ ಪ್ರಮಾಣಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳಿಗೆ ಹಾಗೂ ವಿಶೇಷಚೇತನರಿಗೆ ಮಾನವೀಯತೆಯ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net