ವಿಶೇಷ ಹುಣ್ಣಿಮೆ ಪೂಜೆ ನಾಳೆ

Published on

ಗೋಣಿಕೊಪ್ಪ: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಆ. 1ರಂದು ವಿಶೇಷ ಹುಣ್ಣಿಮೆ ಪೂಜೆ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 8ರಿಂದ 9.30ರವರೆಗೆ ಶ್ರೀ ರಾಮಕೃಷ್ಣ ಪೂಜೆ, 9.30 ರಿಂದ 10.30ರವರೆಗೆ ವಿಶೇಷ ಭಜನೆ, 10.30ರಿಂದ 11ರವರೆಗೆ ಸ್ವಾಮಿ ಪರಹಿತಾನಂದಜೀ ಅವರಿಂದ ಧಾರ್ಮಿಕ ಪ್ರವಚನ, 11ರಿಂದ 12ರವರೆಗೆ ಶ್ರೀ ಶಾರದಾದೇವಿ ಅಷ್ಟೋತ್ತರ ಪೂಜೆ, 12 ಗಂಟೆಗೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net