ವಿಶೇಷ ಲೇಸರ್ ಪ್ರದರ್ಶನ

IMG-20220902-WA0048.jpg
Published on

ದಾವಣಗೆರೆ: ನಗರದ ಮಂಡಿಪೇಟೆಯ ಸ್ವಸ್ತಿಕ್ ಗ್ರೂಪ್, ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ 49ನೇ ವರ್ಷದ ವಿನಾಯಕ ಮಹೋತ್ಸವದಲ್ಲಿ ಸೆ.8ರವರೆಗೆ ಲೇಸರ್‌ ಪ್ರದರ್ಶನ ಹಮ್ಮಿಕೊಂಡಿದೆ.

ಸೀತಾನ್ವೇಷಣೆ, ಸಮುದ್ರೋಲ್ಲಂಘನ ಹಾಗೂ ಲಂಕಾ ದಹನ ಕುರಿತಂತೆ ಗ್ರಾಫಿಕ್ ಆಧಾರಿತ ಲೇಸರ್ ಪ್ರದರ್ಶನ ಇರಲಿದೆ. ಇದಲ್ಲದೆ ನಟ ದಿ. ಪುನೀತ್ ರಾಜಕುಮಾರ್ ಅವರ ಸಾಧನೆಗಳ ಕುರಿತಂತೆ ಭಾವಚಿತ್ರಗಳುಳ್ಳ ಹಾಡಿನ ಪ್ರದರ್ಶನ ಕೂಡ ನಡೆಯಲಿದೆ ಎಂದು ಸಂಘದ ಸಂಘಟಕರಾದ ಎ.ಎಂ.ಕೃಷ್ಣ ಹಾಗೂ ಪ್ರವೀಣ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೌರಾಣಿಕ ಕಥೆಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಈಗಿನ ಕಾಲಮಾನಕ್ಕೆ ತಕ್ಕಂತೆ ಲೇಸರ್ ಪ್ರದರ್ಶನದ ಮೂಲಕ ಈ ಪ್ರಯತ್ನ ನಡೆಸಲಾಗುತ್ತಿದೆ. ರಾವಣ, ವಿಭೀಷಣ, ಸುಗ್ರೀವ ಮೊದಲಾದ ಪಾತ್ರಧಾರಿಗಳ ಬಗ್ಗೆಯೂ ತಿಳಿಸಿಕೊಡುವ ಪ್ರಯತ್ನವಾಗಲಿದೆ ಎಂದರು.

ನಿತ್ಯ ಸಂಜೆ 6 ರಿಂದ 9ರ ವರೆಗೆ ಲೇಸರ್ ಪ್ರದರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೆ ವೀಕ್ಷಣೆಗೆ ಅವಕಾಶ ಬಯಸಿದರೆ ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು. ಮಾಹಿತಿಗೆ ಮೊ.ಸಂ.9886723634, 9844406161 ಇಲ್ಲಿಗೆ ಸಂಪರ್ಕಿಸುವಂತೆ ಕೋರಿದರು. ಸಂಘದ ತಿಲಕ್, ಮಹಾಂತೇಶ್, ಮಹೇಶ್, ವಿನಾಯಕ್ ಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net