ಹುಬ್ಬಳ್ಳಿ : ವಿಜಯಪುರ- ಕೊಟ್ಟಾಯಮ್ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ - ವಿಜಯಪುರ ಮಧ್ಯೆ ವೀಕ್ಲಿ ಅನ್ರಿಸರ್ವ್ಡ್ ಸ್ಪೇಷಲ್ ಎಕ್ಸ್ಪ್ರೆಸ್ರೈಲುಗಳ 11 ಟ್ರಿಪ್ ಸಂಚಾರವನ್ನು ನೈಋತ್ಯ ರೈಲ್ವೆ ವಲಯ ಪ್ರಾರಂಭಿಸಿದೆ.
ವಿಜಯಪುರ- ಕೊಟ್ಟಾಯಮ್ ರೈಲು ನ. 21 ರಿಂದ 2023ರ ಜ. 30ರವರೆಗಿನ ಪ್ರತಿ ಸೋಮವಾರದಿಂದ ವಿಜಯಪುರದಿಂದ ಬೆಳಗ್ಗೆ 11 ಗಂಟೆಗೆ ಹೊರಟು, ಬುಧವಾರ ದಿನ ಬೆಳಗಿನಜಾವ 2.20ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ. ಕೊಟ್ಟಾಯಮ್- ವಿಜಯಪುರ ರೈಲು ನ. 23 ರಿಂದ 2023ರ ೆಬ್ರುವರಿ 1ರವರೆಗಿನ ಪ್ರತಿ ಬುಧವಾರ ಮಧ್ಯಾಹ್ನ 3.30ಕ್ಕೆ ಕೊಟ್ಟಾಯಮ್ನಿಂದ ಹೊರಟು, ಮಾರನೇ ದಿನ ರಾತ್ರಿ 8.30ಕ್ಕೆ ವಿಜಯಪುರ ತಲುಪಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ - ವಿಜಯಪುರ - ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನ. 21 ರಿಂದ 2023ರ ಜ. 30ರವರೆಗಿನ ಪ್ರತಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಅದೇ ದಿನ ರಾತ್ರಿ 8.30ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರ -ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನ. 24 ರಿಂದ 2023ರ ೆ. 2ರವರೆಗಿನ ಪ್ರತಿ ಗುರುವಾರ ರಾತ್ರಿ 9 ಗಂಟೆಗೆ ವಿಜಯಪುರದಿಂದ ಹೊರಟು, ಮಾರನೇ ದಿನ ಬೆಳಗಿನಜಾವ 2.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.