ವಿಶೇಷ ರೈಲುಗಳ ಸಂಚಾರ

Published on

ಹುಬ್ಬಳ್ಳಿ : ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.
ಯಶವಂತಪುರ -ಎಸ್​ಎಸ್​ಎಸ್​ ಹುಬ್ಬಳ್ಳಿ - ಯಶವಂತಪುರ ಸೂಪರ್​ ಾಸ್ಟ್​ ಎಕ್ಸ್​ಪ್ರೆಸ್​ (ಒಂದು ಟ್ರಿಪ್​) ರೈಲು ಅ. 21ರಂದು ಮಧ್ಯಾಹ್ನ 2.30ಕ್ಕೆ ಯಶವಂತಪುರದಿಂದ ಹೊರಟು, ರಾತ್ರಿ 9.50ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಅ.22ರಂದು ಮಧ್ಯರಾತ್ರಿ 1 ಗಂಟೆಗೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, 23ರಂದು ಬೆಳಗ್ಗೆ 8.50ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ- ಬೆಳಗಾವಿ - ಯಶವಂತಪುರ ಸೂಪರ್​ಾಸ್ಟ್​ ಸ್ಪೇಷಲ್​ ಎಕ್ಸ್​ಪ್ರೆಸ್​ ರೈಲು ಅ. 21 ಮತ್ತು 22 ರಂದು ರಾತ್ರಿ 11.30ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.25ಕ್ಕೆ ಬೆಳಗಾವಿ ತಲುಪುವುದು. ಅ. 22 ರಂದು ಬೆಳಗ್ಗೆ 11ಕ್ಕೆ ಬೆಳಗಾವಿಯಿಂದ ಹೊರಡುವ ಈ ರೈಲು, ರಾತ್ರಿ 10 ಗಂಟೆಗೆ ಯಶವಂತಪುರ ತಲುಪಲಿದೆ.
ಬೆಳಗಾವಿ- ಯಶವಂತಪುರ ಸೂಪರ್​ಾಸ್ಟ್​ ಸ್ಪೇಷಲ್​ ಎಕ್ಸ್​ಪ್ರೆಸ್​ (ಒನ್​ ವೇ) ರೈಲು ಅ. 26ರಂದು ರಾತ್ರಿ 10 ಗಂಟಗೆ ಬೆಳಗಾವಿಯಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.50ಕ್ಕೆ ಯಶವಂತಪುರ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net