ವಿಶೇಷ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

19tnpnewsfile01
ಕೆನರಾ ಬ್ಯಾಂಕ್ ಜಾರಿಗೊಳಿಸಿರುವ ವಿಶೇಷ ಠೇವಣಿ ಯೋಜನೆ ಕುರಿತು ಸಿಬ್ಬಂದಿ ವರ್ಗದವರು ತಿ.ನರಸೀಪುರ ಪಟ್ಟಣದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
Published on

ತಿ.ನರಸೀಪುರ: ಗ್ರಾಹಕರ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವ ವಿಶೇಷ ಯೋಜನೆಯನ್ನು ಕೆನರಾ ಬ್ಯಾಂಕ್ ಜಾರಿಗೆ ತಂದಿದ್ದು ಸಾರ್ವಜನಿಕರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಜೆ.ಎಸ್.ನಾಯಕ್ ಮನವಿ ಮಾಡಿದರು.

ಬ್ಯಾಂಕ್‌ನ ವಿಶೇಷ ಠೇವಣಿ ಯೋಜನೆಯ ಕುರಿತು ಪಟ್ಟಣದ ವಿವಿಧೆಡೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಹಕರಿಗಾಗಿ ವಿಶೇಷ ಠೇವಣಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 666 ದಿನಗಳ ಠೇವಣಿಗೆ ವಾರ್ಷಿಕ ಶೇ.7.50 ರಷ್ಟು ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಮತ್ತಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತದೆ ಎಂದರು.

ಆನ್ ಲೈನ್ ನಲ್ಲಿಯೂ ಠೇವಣಿ ಖಾತೆ ತೆರಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ವ್ಯವಸ್ಥಾಪಕ ವಿಜಯ ಸಿಂಗ್ ರಾವತ್, ಸಿಬ್ಬಂದಿ ಲಾವಣ್ಯ, ಅಂಜನಾ, ನಾಗೇಶ್, ಕಿರಣ್, ಅಖಿಲ್,ಮಂಜು, ಗಂಗಾಧರ್ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net