ವಿವೇಚನೆಯಿಂದ ಮತ ಚಲಾಯಿಸಿ

03 yerriswamy 03..
Published on

ಬಳ್ಳಾರಿ : ಲೋಕಸಭೆ ಚುನಾವಣೆಗೆ ಪ್ರತಿಯೊಬ್ಬರೂ ವಿವೇಚನೆಯಿಂದ ಮತ ಚಲಾಯಿಸಿ, ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ತಿಳಿಸಿದರು.
ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದೊಂದಿಗೆ
ಶುಕ್ರವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲ ಹಕ್ಕು. ಉತ್ತಮ ನಾಯಕನ ಆಯ್ಕೆ ಪ್ರತಿಯೊಬ್ಬ ಮತದಾರನ ಆದ್ಯ ಕರ್ತವ್ಯ. ನಿಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಿ ಮಾರಿಕೊಳ್ಳಬೇಡಿ. ಬಿಸಿಲು ಹೆಚ್ಚಿರುವುದರಿಂದ ಆದಷ್ಟು ಬೆಳಗಿನ ಅವಧಿಯಲ್ಲಿಯೇ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಮಡಗಿನ ಬಸಪ್ಪ, ಪಿಡಿಒ ಪ್ರಭಾಕರ, ಐಇಸಿ ರಮೇಶ, ಟಿಸಿ ಮಹಾಂತೇಶ, ಟಿಎಂಎಸ್ ಶೇಖರ ರೆಡ್ಡಿ, ಬಿಲ್ ಕಲೆಕ್ಟರ್ ಕೊಟ್ರಯ್ಯ, ಡಿಇಒ ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net