ವಿವೇಕಾನಂದರದು ಮೇರು ವ್ಯಕ್ತಿತ್ವ

h27-Vivekanand 2
Published on

ಹುಬ್ಬಳ್ಳಿ: ಭಾರತಕ್ಕೆ ವಿವೇಕಾನಂದರು ಕೀರ್ತಿ ಕಳಶ. ಅಮೆರಿಕಕ್ಕೆ ಹೋಗಿ ಭಾಷಣ ಮಾಡಿ ಬಂದ ಮೇಲೆ ಅವರು ಇನ್ನಷ್ಟು ಪ್ರಜ್ವಲಿಸಿದರು. ಅಲ್ಲಿಯವರೆಗೆ ನಾವು ಅವರನ್ನು ಗುರುತಿಸುವಲ್ಲಿ ಗುಲಾಮಿತನದಿಂದ ವಿಫಲರಾಗಿದ್ದೆವು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಆಯೋಜಿಸಿದ್ದ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪ ಬಳಿಯ ರಸ್ತೆ ಕೆಳಸೇತುವೆ ಉದ್ಘಾಟನೆ ಹಾಗೂ ಸ್ವಾಮಿ ವಿವೇಕಾನಂದರ ಕಂಚಿನ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು. ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಸ್ಮಾರಕ ನಿರ್ವಿುಸಲು ಅನುಮತಿ ಸಿಕ್ಕಿರಲಿಲ್ಲ. ಲಾಲ್​ಬಹದ್ದೂರ ಶಾಸ್ತ್ರಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದರ ಪರಿಣಾಮ ಸ್ಮಾರಕ ನಿರ್ವಣವಾಯಿತು ಎಂದರು.

‘ಜಗತ್ತಿನ ಅತಿದೊಡ್ಡ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾಮ್ರ್ ಏಪ್ರಿಲ್ ತಿಂಗಳಲ್ಲಿ ಉದ್ಘಾಟಿಸಲಾಗುವುದು. ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯೆ ಸೂಪರ್ ಫಾಸ್ಟ್ ರೈಲು ಓಡಿಸಬೇಕೆಂಬ ಮನವಿ ಇದೆ. ಇದನ್ನು ಪರಿಷ್ಕೃತಗೊಳಿಸಿ ಬೆಳಗಾವಿಯಿಂದ ಬೆಂಗಳೂರುವರೆಗೆ ಸೂಪರ್​ಫಾಸ್ಟ್ ರೈಲು ಓಡಿಸಲು ಪ್ರಸ್ತಾವನೆ ಸಲ್ಲಿಸಿ. ನಾನು ಕೇಂದ್ರದ ರೈಲ್ವೆ ಸಚಿವರ ಜತೆ ಮಾತನಾಡುವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಉಣಕಲ್ ಕೆರೆಯಲ್ಲಿ ಬೃಹತ್ ವಿವೇಕಾನಂದರ ಪುತ್ಥಳಿ ನಿರ್ವಿುಸುವ ಉದ್ದೇಶವಿದೆ. ರಾಯ್ಪುರದಲ್ಲಿ ಪುತ್ಥಳಿಯ ಮಾದರಿ ನೋಡಿ ಬಂದಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ವಿುಸಲು ಉದ್ದೇಶಿಸಿದ್ದು, ಯೋಜನೆ ರೂಪಿಸಲಾಗುತ್ತಿದೆ ಎಂದರು.

ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂಎಲ್​ಸಿಗಳಾದ ಪ್ರದೀಪ ಶೆಟ್ಟರ್, ಪ್ರೊ.ಎಸ್.ವಿ. ಸಂಕನೂರ, ಸ್ವಾಮಿ ತತ್ವರೂಪಾನಂದ ಮಹಾರಾಜ, ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಮೀಜಿ, ಸ್ವಾಮಿ ರಘುವೀರಾನಂದ ಮಹಾರಾಜ, ಡಿ.ಆರ್. ಪಾಟೀಲ, ಡಿಆರ್​ಎಂ ಅರವಿಂದ ಮಾಳಖೇಡೆ, ಸ್ವರ್ಣ ಗ್ರುಪ್ ಆಫ್ ಕಂಪನಿಗಳ ಮುಖ್ಯಸ್ಥ ಡಾ. ವಿ.ಎಸ್.ವಿ. ಪ್ರಸಾದ, ಇತರರು ಇದ್ದರು.

ಸ್ಮಾರ್ಟ್ ಸಿಟಿ ಯೋಜನೆ ಅಡಿ ತಾರಿಹಾಳ ಬಳಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಗ್ರಾಮ ನಿರ್ವಿುಸಲು ಉದ್ದೇಶಿಸಲಾಗಿದೆ. ಎಲ್ಲ ರೀತಿಯ ಕ್ರೀಡಾಕೂಟಕ್ಕೆ ಅವಕಾಶ ಹಾಗೂ ತರಬೇತಿ ಸಿಗಲಿದೆ. ಕ್ರೀಡಾ ಶಾಲೆಯನ್ನು ಪಕ್ಕದಲ್ಲಿಯೇ ತೆರೆಯಬೇಕೆಂಬ ಯೋಜನೆ ಇದೆ. ರಾಜ್ಯ ಸರ್ಕಾರಕ್ಕೂ ಇದನ್ನು ಮನವರಿಕೆ ಮಾಡಿಕೊಡಲಾಗುವುದು. | ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ರೋಗಗ್ರಸ್ಥವಾಗಿದ್ದ ಭಾರತಕ್ಕೆ ಚಿಕಿತ್ಸೆ ನೀಡಲು ಸ್ವಾಮಿ ವಿವೇಕಾನಂದರು ಜನಿಸಿ ಬಂದರು. ಅವರು ಓಡಾಡಿದ ಜಾಗ, ಮುಟ್ಟಿದ ಸ್ಥಳವೆಲ್ಲ ಜಗದ್ವಿಖ್ಯಾತವಾಗಿವೆ. | ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ವಿವೇಕಾನಂದರ ಚಿಂತನೆ, ಮಾತು ಯಾವುದೂ ಆಲಿಸುವುದು ಬೇಡ. ಆದರೆ, ಅವರ ಭಾವಚಿತ್ರವನ್ನು ತದೇಕ ಚಿತ್ತದಿಂದ ನೋಡಿದರೆ ಸಾಕು, ನಾವು ಬದಲಾಗೇ ಆಗುತ್ತೇವೆ. ಅವರು ಪರಿವ್ರಾಜಕರಾಗಿದ್ದಾಗ ಅವರನ್ನು ಸಂರ್ಪಸಿದ ವ್ಯಕ್ತಿಗಳೆಲ್ಲ ಬದಲಾಗಿದ್ದಾರೆ. ನಾವು ಹೊಸ ಭಾರತ ನಿರ್ವಿುಸಲು ಈಗಲೇ ಪ್ರಯತ್ನಿಸೋಣ. | ಚಕ್ರವರ್ತಿ ಸೂಲಿಬೆಲಿ ಖ್ಯಾತ ವಾಗ್ಮಿ, ಅಂಕಣಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net