ವಿವೇಕಾನಂದರ ತತ್ವ, ಆದರ್ಶ ಪಾಲಿಸಿ

mysore
Published on

ಮೈಸೂರು: ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಫೂರ್ತಿಯಾಗಿದ್ದರು. ಆದ್ದರಿಂದ ಪ್ರತಿಯೊಬ್ಬ ಯುವಕರು ಅವರ ತತ್ವ, ಆದರ್ಶ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧಿಸಬೇಕು ಎಂದು ಹಿರಿಯ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾಜ್ಞಾನಿ ವಿವೇಕಾನಂದರು ಯುವ ಜನರಿಗೆ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದ್ದೀರಿ’ ಎಂದು ಸಂದೇಶ ನೀಡಿದರು.

ವಿವೇಕಾನಂದರು ತತ್ವ ಜ್ಞಾನವನ್ನಲ್ಲದೆ ಎಲ್ಲ ವಿಚಾರಗಳನ್ನು ತಿಳಿದವರಾಗಿದ್ದರು. ನಮ್ಮ ದೇಶದ ಬಗ್ಗೆ, ಬೇರೆ ದೇಶಗಳು ಹೆಮ್ಮಪಡುವಂತೆ ಮಾಡಿದರು. ಆದ್ದರಿಂದ ನಾವುಗಳು ನಮ್ಮ ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಕೇಂದ್ರೀಕರಿಸಿ ಏಕಾಗ್ರತೆಯಿಂದ ಕೆಲಸ ಮಾಡಿದರೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್, ಡಾ.ಜಯರೇವಣ್ಣ, ಯೋಗ ತರಬೇತುದಾರರಾದ ಶ್ರೀ ಶೈಲಕುಂಬಾರ್, ದೇವರಾಜ್, ರಾವಣೀಕರ್, ಲಾವಣ್ಯ ಹಾಜರಿದ್ದರು. ಯೋಗ ಪಟುಗಳಿಂದ ಯೋಗಾಸನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net