ವಿವೇಕಾನಂದರ ಜೀವನ ಚರಿತ್ರೆ ಬದುಕಿಗೆ ಪ್ರೇರಣೆ

CTD VIVEKADARA..
Published on

ಚಿತ್ರದುರ್ಗ:ಸ್ವಾಮಿ ವಿವೇಕಾನಂದರು ತಮ್ಮ ಜೀವಾತಾವಧಿ ಉತ್ತಮ ಮಾರ್ಗದರ್ಶನ ನೀಡುವ ಜನರನ್ನು ಸನ್ಮಾರ್ಗವನ್ನು ತೋರಿದ್ದಾರೆ ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದಾಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಎಸ್‌ಆರ್‌ಬಿಎಂಎಸ್ ರೋಟರಿಬಾಲಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾವು ರಚಿಸಿರುವ ವಿವೇಕಧಾರಾ ಕೃತಿ ಲೋಕಾ ರ್ಪಣಾ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು,ಈಗಾಗಲೇ ಈ ಕೃತಿಯನ್ನು 7ಬಾರಿ ಬಿ ಡುಗಡೆ ಮಾಡಲಾಗಿದೆ.
ಚಿತ್ರದುರ್ಗದಲ್ಲೂ ಬಿಡುಗಡೆ ಮಾಡ ಬೇಕೆಂಬ ನಗರದ ಶಾರದಾ ರಾಮಕೃಷ್ಣ ಆಶ್ರಮದ ಕಾರ‌್ಯದರ್ಶಿ ಶ್ರೀ ಸ್ವಾಮಿ ಬ್ರಹ್ಮ ನಿಷ್ಠಾನಂದ ಸ್ವಾಮೀಜಿ ಅವರ ಮನವಿಯಂತೆ ಈ ಕಾರ‌್ಯಕ್ರಮ ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಉತ್ತಮ ಬದುಕಿಗೆ ಪ್ರೇ ರಣೆಯಾಗಿದೆ.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತದೆ. ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸ ಬೇಕಿದೆ. ಇದರಿಂದ ದಾರ್ಶ ನಿಕರು, ಶರಣರು,ಮಹನೀಯರ ಆದರ್ಶಗಳನ್ನು ಅರಿಯಲು ಸಾಧ್ಯವಾಗಲಿದೆ ಎಂದರು. ರಾಮಕೃಷ್ಣ ಆಶ್ರಮ ಸರ್ವರಲ್ಲೂ ಜ್ಞಾನ ತುಂ ಬುವ,ಸನ್ಮಾರ್ಗದಲ್ಲಿ ಕರೆದೊಯ್ಯವ ಕೆಲಸ ಮಾಡುತ್ತಿದೆ ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸರಕಾರಿ ಕಲಾ ಕಾಲೇಕು ಪ್ರಾಧ್ಯಾಪಕಿ ಪ್ರೊ.ತಾರಿಣಿ ಶುಭದಾಯಿನಿ ಮಾತನಾಡಿ, ಸ್ವಾಮಿ ವಿವೇ ಕಾನಂದರ ವ್ಯಕ್ತಿತ್ವ ನಮಗೆಲ್ಲರಿಗೂ ದಾರಿ ದೀಪವಾಗಿದೆ. ಯುವ ಜನರಲ್ಲಿ ದೇಶಭಕ್ತಿಯೆಡೆ ಅವರು ಜಾಗೃತಿ ಮೂಡಿಸಿದ್ದಾರೆ. ಅವರ ಜೀ ವನ ಚರಿತ್ರೆ ಸಮಕಾಲಿನ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು. ಶ್ರೀ ಸ್ವಾಮಿ ಬ್ರಹ್ಮ ನಿಷ್ಠಾನಂದ ಸ್ವಾಮೀಜಿ,ತುಮಕೂರು ವಿವಿ ಸಿಂ ಡಿಕೇಟ್ ಸದಸ್ಯಡಾ.ರಾಜೀವಲೋಚನ,ರೋಟರಿ ಕ್ಲಬ್ ಅಧ್ಯಕ್ಷ ವೀರಣ್ಣ,ಡಾ.ಜಯರಾಮ್‌ರೆಡ್ಡಿ,ಕೆ.ಮಧುಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net