ವಿವೇಕರ ವಾಣಿ ಮನುಜ ಮತದ ನರನಾಡಿಯಾಗಲಿ

12kkr2
Published on

ಕಿಕ್ಕೇರಿ: ವಿವೇಕರ ವಾಣಿ ಮನುಜ ಮತದ ನರನಾಡಿಯಾದಾಗ ಮಾತ್ರ ಯುವಸಂಪತ್ತು ಅಭಿವೃದ್ಧಿಯ ಪಥಕ್ಕೆ ಸಾಗಲಿದೆ ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಅಭಿಪ್ರಾಯಪಟ್ಟರು.


ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘದಿಂದ ಗುರುವಾರ ಏರ್ಪಡಿಸಿದ್ದ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿವೇಕಾನಂದರ ತಮ್ಮ ಯೌವನಾವಸ್ಥೆಯಲ್ಲಿ ದೇಹ ದಂಡನೆ ಮಾಡಿ ಧಾರ್ಮಿಕ, ಸಾಮಾಜಿಕ ಪ್ರವರ್ತಕರಾಗಿ ವಿಶ್ವಮಾನ್ಯರಾದರು. ನೇಪಥ್ಯದಂತಿದ್ದ ಭಾರತವನ್ನು ಶಿಕಾಗೋ ಧಾರ್ಮಿಕ ಸಮ್ಮೇಳನದ ಮೂಲಕ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟರು. ಇವರ ಅಗಾಧ ಜ್ಞಾಪಕಶಕ್ತಿ ಯುವ ಪೀಳಿಗೆ ದಾರಿದೀಪವಾಗಬೇಕಿದೆ ಎಂದರು.


ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿವೇಕಾನಂದರನ್ನು ಸ್ಮರಿಸಲಾಯಿತು. ಸಮಾಜ ಸೇವಕಿ ಕವಿತಾ ಮತ್ತಿತರರಿದ್ದರು.

ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘದಿಂದ ಗುರುವಾರ ವಿವೇಕಾನಂದರ ಜಯಂತಿ ಕಾರ್ಯಕ್ರಮ ನಡೆಯಿತು. ಟ್ರಸ್ಟಿ ತ್ರಿವೇಣಿ, ಸಮಾಜ ಸೇವಕಿ ಕವಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net