ವಿವಿಯಲ್ಲಿ ಬಂಜಾರ ಪೀಠ

21 YERRISWAMY 01
Published on

ಬಳ್ಳಾರಿ : ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ಲಂಬಾಣಿ ಕಲೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸಲು ವಿವಿಯಲ್ಲಿ ಬಂಜಾರ ಅಧ್ಯಯನ ಪೀಠ ಆರಂಭಿಸಲಾಗುವುದು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ವಿಶ್ವವಿದ್ಯಾಲಯದ ಇಂಗ್ಲಿಷ್, ಕನ್ನಡ ಮತ್ತು ಪ್ರದರ್ಶನ ಕಲಾ ನಾಟಕ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಮತ್ತು ಬದುಕು ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬುಡಕಟ್ಟು ಜನಾಂಗಗಳ ಸಂಸ್ಕೃತಿ, ಉಪಸಂಸ್ಕೃತಿಗಳ ಪೋಷಣೆಗಾಗಿ ನಾವು ಶ್ರಮಿಸುವ ಅಗತ್ಯವಿದೆ ಎಂದರು.
ಕನ್ನಡ ವಿಭಾಗದ ಡಾ. ಸೋಮಶೇಖರ ಮಾತನಾಡಿ, ಲಂಬಾಣಿ ಜನಾಂಗದಲ್ಲಿ ಮದುವೆ ಶಾಸ್ತಗಳು ವಿಶಿಷ್ಟವಾಗಿವೆ. ಬುಡಕಟ್ಟುಗಳಲ್ಲಿ ಮುಖ್ಯ ಸಂಸ್ಕೃತಿಯ ಅಡಿ ಉಪಸಂಸ್ಕೃತಿಗಳು ಹುಟ್ಟಿಕೊಂಡಿವೆ ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net