ವಿವಿಯಲ್ಲಿ ಗಾಂಧೀಜಿ, ಶಾಸ್ತ್ರಿಜಿ ಸ್ಮರಣೆ

Published on

ಬಳ್ಳಾರಿ : ಸಮುದಾಯ ಸೇವೆಯಲ್ಲಿ ತೊಡಗಿರುವ ವಿಶ್ವವಿದ್ಯಾಲಯೇತರ ವ್ಯಕ್ತಿಗಳನ್ನು ಮೊದಲ ಬಾರಿಗೆ ವಿವಿ ಗುರುತಿಸಿ ಗೌರವಿಸುತ್ತಿದೆ ಎಂದು ವಿಎಸ್ ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ನಗರದ ವಿಎಸ್ ಕೆ ವಿವಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಎನ್‌ಎಸ್‌ಎಸ್ ಕೋಶದ ವತಿಯಿಂದ ನಡೆದ ಶ್ರಮದಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವಾ ಕೊಡುಗೆ ನೀಡುತ್ತಿರುವ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿಯವರ ಆಶಯದಂತೆ ಸೌಲಭ್ಯ ವಂಚಿತ ವರ್ಗದ ಸಿಬ್ಬಂದಿಯನ್ನು ಗೌರವಿಸುವ ಪರಿಪಾಠಕ್ಕೆ ವಿವಿಯು ನಾಂದಿ ಹಾಡಿದೆ. ತಮ್ಮ ಸೇವೆಯಲ್ಲಿ ಬದ್ಧತೆ ಪ್ರದರ್ಶಿಸುವ ವಿವಿಧ ಸೇವಾ ವಲಯದ ನೌಕರರಿಗೆ ವಿವಿ ವತಿಯಿಂದ ಮುಂಬರುವ ದಿನಗಳಲ್ಲಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ವಿವಿ ಕುಲಸಚಿವ ಎಸ್. ಎನ್. ರುದ್ರೇಶ್ ‌ಮಾತನಾಡಿದರು. ಬಳಿಕ
23 ಕ್ಷೇತ್ರಗಳ ಸೇವಾನಿರತ ನೌಕರರಿಗೆ ಸನ್ಮಾನ :
ಸುಮಾರು 3 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶವಾಗಾರ ನಿರ್ವಾಹಕ ಅಂದ್ರಯ್ಯ, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮೀ
ಆರೋಗ್ಯ ಇಲಾಖೆಯ ಡಿ ಸುನಿತಾ, ತ್ಯಾಜ್ಯ ನಿರ್ವಹಣೆ ಮಾಡುವ ಶ್ರೀನಿವಾಸುಲು, ಅಂಗನವಾಡಿ ಕಾರ್ಯಕರ್ತೆ ಎಂ. ವಾಣಿ, ಆರೋಗ್ಯ ಇಲಾಖೆಯ ಜಗನ್ನಾಥ, ಹಮಾಲಿ ಮಾಡುವ ಲಕ್ಷ್ಮೀ ನಾರಾಯಣ,
ಕೆಎಸ್‌ಆರ್‌ಟಿಸಿ ಚಾಲಕರಾದ ಅಶೋಕ್, ದಾದಾಪೀರ್, ಪೌರಕಾರ್ಮಿಕ ‌ಹನುಮಂತಪ್ಪ, ಪೋಸ್ಟ್ಮನ್ ಮೌನೇಶ್, ಆಟೋ ಚಾಲಕ ನಾಗರಾಜ್‌ರಾವ್, ಕೂಲಿ ಕಾರ್ಮಿಕ ಚಂದ್ರಶೇಖರ್, ಆಶಾ ಕಾರ್ಯಕರ್ತೆ ರತ್ನಮ್ಮ, ಧೋಬಿಯಾದ ಜಮನಮ್ಮ, ಮನೆ ಕೆಲಸಗಾರರಾದ
ಪದ್ಮಾವತಿ, ಹಾಲು ಮಾರುವ ಮಹೇಶ್, ಹೂ ಮಾರಾಟಗಾರ ಲೋಕಪ್ಪ,
ದಿನಪತ್ರಿಕೆ ವಿತರಕ ಸತೀಶ್, ಜಿಲ್ಲಾಸ್ಪತ್ರೆಯ ಸಿದ್ಧಯ್ಯ,
ಅಭಿನಂದನ್, ಟೈಲರ್ ಕೃಷ್ಣರಾವ್ ಹಾಗೂ ಕೆಇಬಿ
ಲೈನ್‌ಮನ್‌ಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net