ವಿವಿಧೋದ್ದೇಶ ಕೃಷಿ ಸಂಘಕ್ಕೆ ೧.೫೫ ಕೋಟಿ ರೂ. ಲಾಭ

14BRG3
Published on

ಬೋರಗಾಂವ: ಇಲ್ಲಿನ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘವು ಪ್ರಸಕ್ತ ವರ್ಷದಲ್ಲಿ ೪೮.೯ ಲಕ್ಷ ರೂ. ಸಾಲ ವಿತರಿಸಿ ೧.೫೫ ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಉತ್ತಮ ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೋರಗಾಂವ ಮತ್ತು ಸುತ್ತಮುತ್ತಲಿನ ಪ್ರದೇಶದ ರೈತರ ಆರ್ಥಿಕ ಅಭಿವೃದ್ಧಿಗಾಗಿ ದಿ.ರಾವಸಾಹೇಬ ಪಾಟೀಲರು ಈ ಕೃಷಿ ಸಂಘ ಸ್ಥಾಪಿಸಿದರು. ರೈತರ ಆರ್ಥಿಕ ಉನ್ನತಿಗಾಗಿ ಕೃಷಿ ಸಂಘದ ಮೂಲಕ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಂಘ ೩೦೨೩ ಸದಸ್ಯರನ್ನು ಹೊಂದಿದ್ದು, ೨.೫೯ ಲಕ್ಷ ರೂ. ಷೇರು ಬಂಡವಾಳ, ೫೬.೭ ಲಕ್ಷ ರೂ. ಠೇವಣಿ, ೧೦.೯೮ ಲಕ್ಷ ನಿಧಿ, ಬಿಡಿಸಿಸಿ ಡಿಕೆಸಿಸಿ ಬ್ಯಾಂಕ್‌ನಿಂದ ೨೨.೩೯ ಲಕ್ಷ ರೂ. ಸಾಲ, ೪೮.೯ ಲಕ್ಷ ರೂ. ಸದಸ್ಯರ ಸಾಲ, ೪೨.೯೬ ಲಕ್ಷ ರೂ. ಹೂಡಿಕೆ, ೪೨೩ ಕೋಟಿ ೫೬ ಲಕ್ಷ ರೂ. ವಾರ್ಷಿಕ ವಹಿವಾಟು ಮತ್ತು ಶೇ.೯೫.೧೪ರಷ್ಟು ವಸೂಲಿ ಮಾಡಲಾಗಿದೆ. ಗಣಕೀಕೃತ ಸೇವೆಗಳು, ಅಪಘಾತ ವಿಮೆ ಸೇರಿ ವಿವಿಧ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಸುಮಿತ ರೋಡ್ಡ, ನಿರ್ದೇಶಕ ರಾಜೇಂದ್ರ ಪಾಟೀಲ, ಪ್ರದೀಪ ಮಾಳಿ, ಬಾಳಾಸಾಹೇಬ ಸಾತಪುತೆ, ಪ್ರವೀಣ ಪಾಟೀಲ, ರಾಜೇಂದ್ರ ಐದಮಾಳೆ, ರಾಜು ಗಜ್ರೆ, ಸುನೀತಾ ಬಂಕಾಪುರೆ, ಅಶೋಕ ಮಾಳಿ, ತೈಮೂರ ಮುಜಾವರ, ಆರ್.ಟಿ.ಚೌಗುಲಾ, ರಾಕೆಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net