

ಚಿತ್ರದುರ್ಗ: ಬೆಂಗಳೂರಿನ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಂಗಳ ವಾರ ಶ್ರೀ ಜಯದೇವ ಶ್ರೀಗಳ 150ನೇ ಜನ್ಮ ದಿನವನ್ನು ಆಚರಿಸಲಾಯಿತು. ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು.ವ್ಯವ ಸ್ಥಾಪಕ ಶಿವಣ್ಣ ಇದ್ದರು.ಶ್ರೀಗಳ ಕಿರು ಪರಿಚಯದ ಕರಪತ್ರಗಳನ್ನು ಹಂಚಲಾಯಿತು.
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶ್ರೀಗಳ ಜಯಂತ್ಯುತ್ಸವ ಆಚರಿಸಲಾಯಿತು. ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರ ನಾಥ ಅವರ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಗಳ ಜನ್ಮ ದಿನದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಒಳ ರೋ ಗಿಗಳಿಗೆ ಹಣ್ಣು ವಿತರಿಸಲಾಯಿತು. ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭುಸ್ವಾಮೀಜಿ,ಕೂಡಾ ಅಧ್ಯಕ್ಷ ಎಂ.ಕೆ.ತಾಜಪೀರ್, ಎನ್.ಜಯಣ್ಣ,ಪಿ.ಬಿ.ನಿರ್ಮಲಾ,ಅನಿತಾ,ಮೋಕ್ಷಾರುದ್ರಸ್ವಾಮಿ,ಬಾಬು, ಎಚ್.ಬಾಲಚಂದ್ರಪ್ಪ,ಕೆಇಬಿಷಣ್ಮುಖಪ್ಪ,ಮುರುಗೇಶ್,ಮ ಲ್ಲಣ್ಣ ಮತ್ತಿತರರು ಇದ್ದರು.