

ವಿಜಯವಾಣಿ ಸುದ್ದಿಜಾಲ ಗದಗ
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೆಯನ್ನು ಸೋಮವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಆಚರಿಸಲಾಯಿತು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿದ್ಯಾಥಿರ್ಗಳು, ಮಕ್ಕಳು, ಭಕ್ತರು ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ವಿವಿಧ ಧಾಮಿರ್ಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು. ಸೋಮವಾರ ಬೆಳಗ್ಗೆ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾದರು. ಧಾಮಿರ್ಕ ಕಾರ್ಯಕ್ರಮದೊಂದಿಗೆ ದಿನವಿಡೀ ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆದವು. ಅಂಧರ ಸಂಗೀತ ಶಾಲೆ ವಿದ್ಯಾಥಿರ್ಗಳಿಂದ ಸಂಗೀತ ಸೇವೆ ಮೂಲಕ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಿದರು.
ಪುಣ್ಯರಾಧನೆ ನಿಮಿತ್ಯ ವಿವಿಧ ಸಂ ಸಂಸ್ಥೆಗಳು, ಆಟೋ ಚಾಲಕರ- ಸಂ, ವ್ಯಾಪಾರಿಗಳು, ಪ್ರತಿ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಜನರು ವಿವಿಧ ವೃತ್ತಗಳಲ್ಲಿ ಪುಟ್ಟರಾಜರ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ರೈಲ್ವೆ ನಿಲ್ದಾಣ, ಹಳೆಯ ಬಸ್ ನಿಲ್ದಾಣ, ಸ್ಟೇಷನ್ ರಸ್ತೆ, ಕಾಟನ್ ಮಾರುಕಟ್ಟೆ ರಸ್ತೆ, ಮುಳಗುಂದ ನಾಕಾ ಹತ್ತಿರ, ಹಾತಲಗೇರಿ ನಾಕಾ, ಶಹಾಪುರ ಪೇಟೆ, ವೆಂಕಟೇಶ ಸಿನಿಮಾ ಮಂದಿರ ರಸ್ತೆ, ಬೆಟಗೇರಿಯ ತೆಂಗಿನಕಾಯಿ ಬಜಾರ್, ಎಸ್.ಎಂ ಕೃಷ್ಣ ನಗರ, ಎಪಿಎಂಸಿ ಆವರಣದಲ್ಲಿ, ಹೊಸ ಬಸ್ ನಿಲ್ದಾಣದ ಆಟೋ ನಿಲ್ದಾಣದ ಸೇರಿದಂತೆ ವಿವಿಧ ಭಾಗಗಳಲ್ಲಿ ಅನ್ನಸಂತರ್ಪಣೆ ನಡೆಯಿತು.
ಮೆರವಣಿಗೆ:
ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಗವಾಯಿಗಳ ಭಾವಚಿತ್ರ ಮೆರವಣಿಗೆ ನಗರಾದ್ಯಂತ ಜರುಗಿತು. ಭಾವಚಿತ್ರದ ಮೆರವಣಿಗೆಗೆ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನಗಾರಿ ಬಾರಿಸುವುದರ ಮೂಲಕ ಚಾಲನೆ ನೀಡಿದರು. ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಆರಂಭವಾದ ಮೆರವಣಿಗೆಯೂ ಭೂಮ್ಮರಡ್ಡಿ ಸರ್ಕಲ್, ಬಸವೇಶ್ವರ ವೃತ್ತ, ರಾಚೋಟೇಶ್ವರ ಗುಡಿ, ಮಹೇಂದ್ರಕರ್ ಸರ್ಕಲ್, ತೋಂಟದಾರ್ಯಮಠ, ಗಾಂಧಿ ವೃತ್ತದಿಂದ ವೀರೇಶ್ವರ ಪುಣ್ಯಾಶ್ರಮದವರಿಗೆ ಮೆರವಣಿಗೆ ನಡೆಯಿತು.