ವಿವಿಧೆಡೆ ನಗದು, ಆಭರಣ ಕಳವು

ವಿವಿಧೆಡೆ ನಗದು, ಆಭರಣ ಕಳವು
Published on

ಹಾಸನ: ತಾಲೂಕಿನ ದೊಡ್ಡಪುರ ರಾಮೇಶ್ವರ ನಗರದಲ್ಲಿ ಇತ್ತೀಚೆಗೆ 2 ಮನೆಗಳ ಬಾಗಿಲು ಮುರಿದು, ಬೀರು ಒಡೆದು 1.50 ಲಕ್ಷ ನಗದು ಹಾಗೂ 56 ಸಾವಿರ ಬೆಲೆ ಬಾಳುವ ಚಿನ್ನಾಭರಣ ದೋಚಲಾಗಿದೆ.
ಉಮೇಶ ಹಾಗೂ ಮನೋಹರ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ತಾಲೂಕಿನ ಹರುವನಹಳ್ಳಿ ಗ್ರಾಮದಲ್ಲಿ ನಡೆದಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಒಂಟಿ ಮಹಿಳೆಯರು ವಾಸವಾಗಿದ್ದ ಮನೆಯ ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ 70 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಲಾಗಿದೆ.
ಹರುವನಹಳ್ಳಿಯ ಗೌರಮ್ಮ ಎಂಬುವರ ಮನೆಯಲ್ಲಿ 20 ಸಾವಿರ ನಗದು ದೋಚಿದ್ದರೆ. ಚೀರನಹಳ್ಳಿಯ ಪಾರ್ವತಮ್ಮ ಎಂಬುವರ ಮನೆಯಲ್ಲಿ 15 ಸಾವಿರ ಬೆಲೆ ಬಾಳುವ ಚಿನ್ನದ ಉಂಗುರ ಹಾಗೂ 50 ಸಾವಿರ ನಗದನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ದುದ್ದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net