

ಬಳ್ಳಾರಿ : ಲೋಕಸಭಾ ಚುನಾವಣೆ ಹಿನ್ನಲೆ ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ವಿವಿಧೆಡೆ ದಾಳಿ ನಡೆಸಿ 1.71 ಲಕ್ಷ ರೂ. ಮೌಲ್ಯದ 94 ಲೀ. ಮದ್ಯ ವಶಪಡಿಕೊಂಡು 03 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ತಿಳಿಸಿದ್ದಾರೆ.
ತಾಲೂಕಿನ ಕೋಳುರು ಕ್ರಾಸ್, ಸಂಡೂರು ತಾಲೂಕಿನ ಡಿ. ಗೊಲ್ಲರಹಟ್ಟಿ ಕ್ರಾಸ್, ಸಿರುಗುಪ್ಪ ತಾಲೂಕಿನ ನಾಗರಹಾಳು ಗ್ರಾಮದಲ್ಲಿ ಅಕ್ರಮ ಮದ್ಯ ಸಾಗಣೆ ವೇಳೆ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.