ವಿವಿಧೆಡೆ ಚಂದ್ರಾಸಿಂಗ್ ಮತಯಾಚನೆ

bavagi
Published on

ಬೀದರ್: ದಕ್ಷಿಣ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ಮತಯಾಚನೆ ಮಾಡಿದರು. ಕ್ಷೇತ್ರದ ಕುತ್ತಾಬಾದ್, ಸಣ್ಣ ಹೊಕ್ರಾಣ, ಕರಕನಳ್ಳಿ, ಬಾವಗಿ ಗ್ರಾಮಗಳಿಗೆ ಭೇಟಿ ನೀಡಿ ಚುನಾವಣೆ ಪ್ರಚಾರ ನಡೆಸಿದರು.

ಬಾವಗಿ ಗ್ರಾಮದ ಪವಾಡ ಪುರುಷ ಶ್ರೀ ಗುರು ಭದ್ರೇಶ್ವರ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದಕ್ಕೂ ಮೊದಲು ಸಿರ್ಸಿ ಎ ಗ್ರಾಮದಲ್ಲಿ ನಡೆದ ಹಜರತ್ ರತನ್ ಸಾಬ್ ದರ್ಗಾ ಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದಕ್ಷಿಣ ಕ್ಷೇತ್ರದ ಬದಲಾವಣೆಗಾಗಿ ಒಂದು ಬಾರಿ ತಮಗೆ ಅವಕಾಶ ನೀಡಬೇಕು ಎಂದು ಚಂದ್ರಾಸಿಂಗ್ ಮನವಿ ಮಾಡಿದರು.

ಕ್ಷೇತ್ರದ ಎಲ್ಲೇ ಹೋದರೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಂಬಲಿಗರು, ಕಾರ್ಯಕರ್ತರು ಹುಮ್ಮಸ್ಸಿನಿಂದ ಜತೆಗೆ ಸೇರುತ್ತಿದ್ದಾರೆ. ಕ್ಷೇತ್ರದ ಮತದಾರರು ಈಗ ನನಗೆ ಆಶೀರ್ವಾದ ಮಾಡಿದರೆ ಮುಂದಿನ 60 ತಿಂಗಳ ಕಾಲ ನಿಮ್ಮ ಸೇವೆ ಮಾಡುವೆ ಎಂದು ವಾಗ್ದಾನ ಮಾಡಿದರು.

13ರಂದು ನಾನು ಕಾಂಗ್ರೆಸ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಗ್ರಾಮಸ್ಥರು ಆಗಮಿಸಿ ಬೆಂಬಲ ಸೂಚಿಸಿ, ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net