ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Adarsha Shakshaka Prashasti Application
Published on

ಚಾಮರಾಜನಗರ: ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಜಿಲ್ಲಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೃತಕಾಂಗ ಜೋಡಣೆ ಅಭಿಯಂತರರ ಹುದ್ದೆಗೆ ಪಿ ಮತ್ತು ಒ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯ ಜತೆಗೆ 2 ವರ್ಷಗಳ ಅನುಭವ ಹೊಂದಿರಬೇಕು. ಫಿಸಿಯೋಥೆರಪಿಸ್ಟ್ ಹುದ್ದೆಗೆ ಡಿಗ್ರಿ ಇನ್ ಫಿಸಿಯೋಥೆರಪಿ ಅಥವಾ ಅಕ್ಯುಪೇಷನ್ ಥೆರಫಿಯ ಜತೆಗೆ 2 ವರ್ಷ ಅನುಭವ ಹೊಂದಿರಬೇಕು. ಮೊಬಿಲಿಟಿ ಇನ್‌ಸ್ಟ್ರಕ್ಟರ್ ಹುದ್ದೆಗೆ ಸರ್ಟಿಫಿಕೆಟ್ ಕೋರ್ಸ್ ಇನ್ ಒ ಮತ್ತು ಎಂ ವಿದ್ಯಾರ್ಹತೆ ಹೊಂದಿರಬೇಕು. ಇಯರ್ ಮೋಲ್ಡ್ ಟೆಕ್ನಿಷಿಯನ್ ಹುದ್ದೆಗೆ ಸರ್ಟಿಫಿಕೆಟ್ ಕೋರ್ಸ್ ಇನ್ ಇಯರ್ ಮೋಲ್ಡ್ ಟೆಕ್ನಾಲಜಿ ಹಾಗೂ ಲೆದರ್ ವರ್ಕರ್ ಅಥವಾ ಶೂ ಮೇಕರ್ ಹುದ್ದೆಗೆ ಸರ್ಟಿಫಿಕೆಟ್ ಇನ್ ಲೆದರ್ ವರ್ಕಿಂಗ್ ಅಂಡ್ ಶೂ ಮೇಕಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಅಕೌಂಟೆಂಟ್ ಕಂ ಕ್ಲರ್ಕ್ ಹುದ್ದೆಗೆ ಎಂ.ಕಾಂ, ಬಿ.ಕಾಂ ಪದವಿ ಮತ್ತು ಗಣಕಯಂತ್ರದ ಅಕೌಂಟೆಂಟ್ ಕಾರ್ಯ ಅನುಭವ ಹೊಂದಿರಬೇಕು. ಕಚೇರಿ ಸೇವಕ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಹುದ್ದೆಗಳ ಸಂಬಂಧ ಕ್ಷೇತ್ರ ಅನುಭವ ಹೊಂದಿರುವ ವಿಕಲಚೇತನರಿಗೆ ಮತ್ತು ಸ್ಥಳಿಯರಿಗೆ ಆದ್ಯತೆ ನೀಡಲಾಗುವುದು. ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕ ಮತ್ತು ಗೌರವಧನದ ಆಧಾರಿತವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಯಡಪುರದಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಅಥವಾ ಭೋಧನಾ ಆಸ್ಪತ್ರೆಯ ನೆಲಮಹಡಿ ಕೊಠಡಿ ಸಂಖ್ಯೆ 193ರ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ (ಡಿ.ಡಿ.ಆರ್.ಸಿ) ಸೆ.10ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರೀನ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net